ಮಂಡ್ಯ,ಮೇ,4,2021(www.justkannada.in): ಬೆಂಗಳೂರಿನಿಂದ ಶ್ರೀರಂಗಪಟ್ಟಣಕ್ಕೆ ಬಂದು ಮೃತ ಕೊರೊನಾ ಸೋಂಕಿತರ ಅಸ್ಥಿ ವಿಸರ್ಜನೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಸಂಗಮ್ ಸೇರಿ ಘೋಸಾಯ್ ಘಾಟ್ ನಲ್ಲಿ ಅಸ್ಥಿ ವಿಸರ್ಜನೆ ಮಾಡದಂತೆ ಗ್ರಾಮಸ್ಥರು ರಸ್ತೆ ತಡೆದಿದ್ದಾರೆ.
ಶ್ರೀರಂಗಪಟ್ಟಣ ಟೌನ್ ನ ಗಂಜಾಮ್ ನ ಗುಂಬಸ್ ರಸ್ತೆಗೆ ಮರಮುಟ್ಟು ಅಡ್ಡ ಹಾಕಿ ಗ್ರಾಮಸ್ಥರು ರಸ್ತೆ ತಡೆದಿದ್ದಾರೆ. ಬೆಂಗಳೂರಿನಿಂದ ಅಸ್ಥಿ ವಿಸರ್ಜನೆಗೆ ಬಂದ ಕಾರುಗಳನ್ನು ತಡೆದು ವಾಪಸ್ಸು ಕಳಿಸುತ್ತಿದ್ದಾರೆ. ಶ್ರೀರಂಗಪಟ್ಟಣ ಟೌನ್ ವ್ಯಾಪ್ತಿಯಲ್ಲಿ ಅಸ್ಥಿ ವಿಸರ್ಜನೆಗೆ ತಾಲೂಕು ಆಡಳಿತ ನಿಷೇಧ ಹೇರಿದರೂ ಸಹ ಸ್ಥಳೀಯ ಪುರೋಹಿತರಿಂದ ಅಕ್ರಮ ನಡೆಯುತ್ತಿದೆ.
ಮೃತ ಕೊರೊನಾ ಸೋಂಕಿತರಿಂದ ಗ್ರಾಮದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಬಗ್ಗೆ ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಸ್ಥಳೀಯ ವೈದಿಕ ಪುರೋಹಿತರು ಬೆಂಗಳೂರಿನವರನ್ನು ಕರೆತಂದು ಊರಿನ ಸುತ್ತಮುತ್ತಾ ಅಸ್ಥಿ ವಿಸರ್ಜನೆ ಮಾಡಿಸುತ್ತಿರುವುದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ತಾಲೂಕು ಆಡಳಿತ ಅಸ್ಥಿ ವಿಸರ್ಜನೆಗೆ ನಿಷೇಧ ಹೇರಿದರೂ ಸಹ ಅಸ್ಥಿ ವಿಸರ್ಜನೆ ನಡೆಯುತ್ತಿದ್ದು ಇದು ಪೊಲೀಸರ ವೈಪಲ್ಯ ಕಾರಣವೆಂದು ಪೊಲೀಸರ ವಿರುದ್ದ ಜನರು ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರಿನಿಂದ ಅಸ್ಥಿ ವಿಸರ್ಜನೆಗೆ ಬಂದ ಕಾರುಗಳು ಬಂದ ದಾರಿಗೆ ಸುಂಕವಿಲ್ಲದೆ ವಾಪಸ್ಸು ತೆರಳುತ್ತಿವೆ.
Key words: srirangapatna- excretion – corona –infected-villagers -road