ಮೈಸೂರು,ಮೇ,7,2021(www.justkannada.in): ರಾಜ್ಯದಲ್ಲಿ ಆಕ್ಸಿಜನ್ ವಾರ್ ಶುರುವಾಗಿದ್ದು ಬಿಜೆಪಿ ಸಂಸದರು ಎಚ್ಚೆತ್ತುಕೊಳ್ಳದಿದ್ದರೇ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ತಲೆದಂಡ ಖಚಿತ ಎಂದು ಶಾಸಕ ಜಿ.ಟಿ ದೇವೇಗೌಡ ಭವಿಷ್ಯ ನುಡಿದಿದ್ದಾರೆ.
ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ, ಮೈಸೂರಿನಲ್ಲಿ ಆಕ್ಸಿಜನ್ ವಾರ್ ನಡೆಯುತ್ತಿದೆ. ಚಾಮರಾಜನಗರಕ್ಕಿಂತ ದೊಡ್ಡ ಅನಾಹುತ ಮೈಸೂರಿನಲ್ಲಿ ನಡೆಯಲಿದೆ. ಮಂತ್ರಿಗಳಿಗೆ ಆಕ್ಸಿಜನ್ ಬೆಡ್ ರೆಮ್ ಡಿಸಿವಿರ್ ಸಂಬಂಧ ಒಬ್ಬೊಬ್ಬರಿಗೆ ಒಂದೊಂದು ಜವಾಬ್ದಾರಿ ಹಂಚಿಕೆ ಮಾಡಿದೆ. ಚಾಮರಾಜನಗರದಲ್ಲಿ 24 ಜನರಿಗೆ ಆಕ್ಸಿಜನ್ ಇಲ್ಲದೆ ಮೃತಪಟ್ಟ ಸುದ್ದಿ ದೇಶಾದ್ಯಂತ ಹರಡಿತ್ತು. ಹುಬ್ಬಳ್ಳಿಯಲ್ಲಿ ನನ್ನ ಸ್ನೇಹಿತ ದೇಸಾಯಿಗೌಡ ಸೇರಿ ಐದು ಮಂದಿ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ್ದಾರೆ. ಈ ಸಂಬಂಧ ಚಾಮರಾಜನಗರ ನಗರದ ಪ್ರಕರಣದ ಬಗ್ಗೆ ಜ್ಯೂಡಿಷಿಯಲ್ ತನಿಖೆ ನಡೆಯುತ್ತಿದೆ. ಯಾರು ತಪ್ಪು ಮಾಡಿದ್ದಾರೋ ಅವ್ರಿಗೆ ಶಿಕ್ಷೆ ಅಗುತ್ತೆ ಅನ್ನೋ ನಂಬಿಕೆ ಇದೆ ಎಂದರು.
ಮೈಸೂರಿಗೆ ಮಹಾರಾಜರ ಕೊಡುಗೆ ಅಪಾರ. ಅವರು ಕೊಟ್ಟ ಆಸ್ಪತ್ರೆಗಳಿಂದ ರಾಜ್ಯದಾದ್ಯಂತ ರೋಗಿಗಳು ಮೈಸೂರಿಗೆ ಬರುತ್ತಿದ್ದಾರೆ. ದಿನನಿತ್ಯ ಮೈಸೂರಿನಲ್ಲಿ 3 ಸಾವಿರಕ್ಕೂ ಹೆಚ್ಚು ಪಾಸಿಟಿವ್ ಬರ್ತಿದೆ. ಸರ್ಕಾರಿ, ಖಾಸಗಿ ಸೇರಿ 7 ಸಾವಿರ ಬೆಡ್ ವ್ಯವಸ್ಥೆ ಇದೆ. ಮೈಸೂರಿಗೆ 70 ಮೆಟ್ರಿಕ್ ಟನ್ ಆಕ್ಸಿಜನ್ ಬೇಕು. ಸದ್ಯ 30 ಮೆಟ್ರಿಕ್ ಟನ್ ಮಾತ್ರ ಮೈಸೂರಿಗೆ ಬರ್ತಿದೆ. ಸದರನ್ ಆಕ್ಸಿಜನ್ ಪ್ಲಾಂಟ್ ನಲ್ಲಿ 300 ಸಿಲಿಂಡರ್ ಉತ್ಪಾದನೆ ಇದೆ. ಮೈಸೂರಿಗೆ 2500 ಜಂಬೂ ಸಿಲಿಂಡರ್ ಬೇಕು. ಸರ್ಕಾರ ಮೈಸೂರು ಜಿಲ್ಲೆಗೆ ಎಷ್ಟು ಆಕ್ಸಿಜನ್ ಬೇಕು ಅನ್ನೋದನ್ನ ಸರ್ಕಾರ ನಿಗದಿ ಮಾಡಿಲ್ಲ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಆಕ್ಸಿಜನ್ ವಾರ್ ನಡೆಯುತ್ತಿದೆ. ಮುಂದೆ ಇದೇ ರೀತಿ ಪರಿಸ್ಥಿತಿ ಮುಂದುವರೆದರೆ ಕೇಂದ್ರ ರಾಜ್ಯ ಎರಡು ತಲೆ ಕೊಡಬೇಕು. ಕೊರಫನಾ ತಡಯಲು ವಿಫವಾದ್ರೆ ಕೇಂದ್ರ ಸರ್ಕಾರ ರಾಜೀನಾಮೆ ಕೊಡಬೇಕು ಎಂದು ಶಾಸಕ ಜಿ.ಟಿ ದೇವೇಗೌಡ ಹೇಳಿದರು.
Key words: Oxygen War – begun – state- minister gt devegowda