ಬೆಂಗಳೂರು,ಜು,9,2019(www.justkannada.in): ಸಮ್ಮಿಶ್ರ ಸರ್ಕಾರ ಇರುತ್ತೆ ಎಲ್ಲಿಯೂ ಹೋಗಲ್ಲ. ಅತೃಪ್ತರ ಮನವೊಲಿಕೆ ನಡೆಯುತ್ತಿದೆ ಎಂದು ಸಚಿವ ಡಿ.ಕೆ ಶಿವಕುಮಾರ್ ತಿಳಿಸಿದರು.
ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಚಿವ ಡಿ.ಕೆ ಶಿವಕುಮಾರ್, ಪಕ್ಷಕ್ಕೆ ಹಾನಿ ಮಾಡಿದವರ ವಿರುದ್ಧ ಕ್ರಮಕ್ಕೆ ಶಾಸಕರು ಒತ್ತಾಯಿಸಿದ್ದಾರೆ. ಸಿಎಲ್ ಪಿ ನಾಯಕರಿಗೆ ಶಾಸಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದೀವಿ. ಕೆಲವರು ರಾಜಿನಾಮೆ ಕೊಟ್ಟಿದ್ದಾರೆ. ಆದರೆ ಪಕ್ಷ ಬಿಡ್ತೀವಿ ಅಂತಾ ಹೇಳಿಲ್ಲ ಎಂದು ತಿಳಿಸಿದರು.
ಬಿಜೆಪಿಯವ್ರು ಪ್ರಯತ್ನ ಮಾಡುತ್ತಿರಲಿ. ಬಿ.ಎಸ್ ಯಡಿಯೂರಪ್ಪ ಏನೂ ಮಾಡ್ತಿಲ್ಲ ಅಂತಿದಾರೆ. ರಾಜನಾಥ್ ಸಿಂಗ್ ಅವರು ಸಹ ಹಾಗೇ ಅಂದಿದ್ದಾರೆ. ಆದರೆ ಬಿಜೆಪಿಯವರ ಹೇಳಿಕೆ ಮತ್ತು ನಡೆ ಎರಡಕ್ಕೂ ವ್ಯತ್ಯಾಸವಿದೆ. ಬಿಎಸ್ ವೈ ಅವರ ಪಿಎ ಕೆಲಸ ಮಾಡ್ತಿದಾನೆ. ಅವರ ಫೋನ್ ಗಳು ಕೆಲಸ ಮಾಡ್ತೀವೆ ಎಂದು ವ್ಯಂಗ್ಯವಾಡಿದರು.
ಹಾಗೆಯೇ ಸಚಿವ ಕೆ.ಜೆ ಜಾರ್ಜ್ ಮಾತನಾಡಿ, ನಾವೆಲ್ಲರೂ ಒಮ್ಮತದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೀವಿ. ಸಿಎಲ್ ಪಿ ನಾಯಕ ಏನು ಹೇಳ್ತಾರೋ ಅದನ್ನ ಮಾಡ್ತೀವಿ. ಸರ್ಕಾರ ಉಳಿಸಬೇಕೆಂಬ ಉದ್ದೇಶ ನಮ್ಮದಿದೆ ಸರ್ಕಾರ ಉಳಿಸೋಕೆ ಬೇಕಾದ ಎಲ್ಲಾ ಕೆಲಸವನ್ನ ಮಾಡ್ತೀವಿ ಎಂದು ನುಡಿದರು.
ರಾಮಲಿಂಗಾರೆಡ್ಡಿ ಅವರನ್ನು ಮನವೊಲಿಸುತ್ತೇವೆ- ಕೆ ಸಿ ವೇಣುಗೋಪಾಲ್ ಹೇಳಿಕೆ
ವಿಧಾನಸೌಧದಲ್ಲಿ ಇದೇ ವೇಳೆ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ , ರಾಮಲಿಂಗಾರೆಡ್ಡಿ ಅವರನ್ನು ಮನವೊಲಿಸುತ್ತೇವೆ. ಸರ್ಕಾರ ಸೇಫ್ ಆಗಲಿದೆ. ಸರ್ಕಾರಕ್ಕೆ ಅಪಾಯ ಇಲ್ಲ ಎಂದರು.
Key words: coalition government -not going- DK Sivakumar-bangalore