ಬೆಂಗಳೂರು,ಮೇ,12,2021(www.justkannada.in): ರಾಜ್ಯದಲ್ಲಿ ಕೊರೋನಾ ಲಸಿಕೆಗೆ ಕೊರತೆ ಇಲ್ಲ. ಹಂತ ಹಂತವಾಗಿ ಎಲ್ಲರಿಗೂ ಲಸಿಕೆ ಕೊಡುತ್ತೇವೆ ಎಂದು ಡಿಸಿಎಂ ಅಶ್ವಥ್ ನಾರಾಯಣ ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮಗಳ ಜತೆ ಇಂದು ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, ಕೋವಿಡ್ ಟೆಸ್ಟ್ ಕಡಿಮೆ ಮಾಡಿರುವ ಕುರಿತು ಟೀಕೆಗಳು ಬರುತ್ತಿದೆ. ನಮ್ಮ ಸಾಮರ್ಥ್ಯಕ್ಕಿಂತ ಹೆಚ್ಚು ಕೋವಿಡ್ ಟೆಸ್ಟ್ ಮಾಡಿದ್ದೇವೆ. ಇದರಿಂದ ಟೆಸ್ಟ್ ರಿಪೋರ್ಟ್ ಬರುವುದು ತಡವಾಗುತ್ತಿತ್ತು. ಹೀಗಾಗಿ ರಿಪೋರ್ಟ್ ಬೇಗ ಸಿಗುವಂತೆ ಮಾಡಲು ರೋಗ ಲಕ್ಷಣ ಇದ್ದವರಿಗೆ ಮಾತ್ರ ಟೆಸ್ಟ್ ಮಾಡಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು.
ಕಡಿಮೆ ಟೆಸ್ಟ್ ಮಾಡಿದಾಗಲೇ ಹೆಚ್ಚು ಪಾಸಿಟಿವ್ ಕೇಸ್ ಬರುತ್ತದೆ. ಪಾಸಿಟಿವಿಟಿ ರೇಟ್ ಕಡಿಮೆ ತೋರಿಸಲು ಕಡಿಮೆ ಟೆಸ್ಟ್ ಮಾಡಲಾಗುತ್ತಿದೆ ಎಂಬುದು ಸುಳ್ಳು. ಸರ್ಕಾರ ಯಾವುದನ್ನೂ ಮುಚ್ಚಿಡುವ ಪ್ರಯತ್ನ ಮಾಡುತ್ತಿಲ್ಲ ಎಂದು ಅಶ್ವಥ್ ನಾರಾಯಣ್ ತಿಳಿಸಿದರು.
ENGLISH SUMMARY….
DCM Ashwathnarayan on shortage of COVID vaccine and decrease in number of Corona testing
Bengaluru, May 12, 2021 (www.justkannada.in): Deputy Chief Minister Ashwathnarayan today clarified that there is no shortage of COVID vaccination and it will be provided to all in phases.
Responding to the allegations on shortage of vaccine and testing he informed that the government is doing all that it can and testing is being done beyond capacity. “Due to the number of tests, there was a delay in getting the reports. Hence, to get the test report soon measures were taken to conduct testing only for patients who have symptoms,” he explained.
Further, he also clarified that the government is not hiding anything and is being transparent.
Keywords: DCM Ashwathnarayan/ COVID/ Vaccination/ COVID testing/ Govt. not hiding anything
Key words: Lack -covid vaccine- Corona Testing-DCM-Ashwath Narayan