ಬೆಂಗಳೂರು,ಮೇ,18,2021(www.justkannada.in): ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಣೆ ಅನಿವಾರ್ಯ. ರಾಜ್ಯದಲ್ಲಿ ಒಂದು ತಿಂಗಳ ಕಾಲ ಲಾಕ್ ಡೌನ್ ವಿಸ್ತರಿಸಿ, ಬಡವರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಲಾಕ್ ಡೌನ್ ವಿಸ್ತರಣೆ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಮೇ. 24 ರ ಬಳಿಕ ಲಾಕ್ ಡೌನ್ ವಿಸ್ತರಣೆ ಮಾಡುವುದು ಅನಿವಾರ್ಯ, ಲಾಕ್ ಡೌನ್ ವಿಸ್ತರಿಸದಿದ್ದರೆ ದೊಡ್ಡ ದೊಡ್ಡ ಅನಾಹುತ ಆಗಲಿದೆ. ಹೀಗಾಗಿ ಲಾಕ್ ಡೌನ್ ವಿಸ್ತರಿಸುವುದು ಸೂಕ್ತ, ಲಾಕ್ ಡೌನ್ ಜೊತೆಗೆ ಸರ್ಕಾರ ಬಡವರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಕೊರೋನಾ ಸೋಂಕು ಕಡಿಮೆಯಾಗಿಲ್ಲ. ಕೋವಿಡ್ ಟೆಸ್ಟ್ ಸಂಖ್ಯೆ ಕಡಿಮೆ ಮಾಡಲಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಮತ್ತಷ್ಟು ಸಾವು ನೋವುಗಳು ಹೆಚ್ಚಾಗುತ್ತವೆ. ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವುದಕ್ಕೆ ಹೊರಟಿದೆ. ಜನರ ದಿಕ್ಕು ತಪ್ಪಿಸಿ ಯಡವಟ್ಟು ಮಾಡುತ್ತೀರಿ. ಈಗಾಗಲೆ ಕೋವಿಡ್ ವಿಚಾರದಲ್ಲಿ ತಪ್ಪು ಮಾಡಿದ್ದೀರಿ. ಮತ್ತೆ ತಪ್ಪು ಮಾಡಬೇಡಿ ಎಂದು ರಾಜ್ಯ ಸರ್ಕಾರಕ್ಕೆ ಹೆಚ್.ಡಿಕೆ ಸಲಹೆ ನೀಡಿದರು.
ENGLISH SUMMARY…
Former CM HDK insists State Govt. to extend the lockdown for one month and announce package for the poor
Bengaluru, May 18, 2021 (www.justkannada.in): Former Chief Minister H.D. Kumaraswamy has suggested the State Government extend the lockdown in the state for one month and announce a package for the poor.
Speaking to the media persons in Bengaluru about extending the lockdown in the State he informed that the cases of Corona are increasing day by day in the State and hence it is inevitable to extend the lockdown after May 24. Otherwise, we have to face a disaster. It is proper to extend the lockdown and the government should announce a package to the poor.
“The COVID-19 Pandemic has not reduced in the State. Only the number of testing has been reduced which will further lead to an increase in the number of cases and deaths. The State Government is trying to cover its failure. It is misleading the people. The government has already utterly failed in managing the pandemic. Please don’t repeat the mistake,” he suggested.
Keywords: Former CM H.D. Kumaraswamy/ COVID-19 Pandemic/ State Government/ suggests to extend lockdown for one month
Key words: Extend -lockdown -one month- Declare- package – poor- Former CM-HD kumaraswamy