ಬೆಂಗಳೂರು,ಜು,10,2019(www.justkannada.in): ಸಮ್ಮಿಶ್ರ ಸರ್ಕಾರದ ಮತ್ತಿಬ್ಬರು ಶಾಸಕರೂ ರಾಜೀನಾಮೆ ನೀಡಿದ ಬೆನ್ನಲ್ಲೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಇದೀಗ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇಂದು ಸಮ್ಮಿಶ್ರ ಸರ್ಕಾರದ ಮತ್ತೆರೆಡು ವಿಕೆಟ್ ಪತನವಾಗಿದ್ದು ಕಾಂಗ್ರೆಸ್ ಶಾಸಕರಾದ ಎಂಟಿಬಿ ನಾಗರಾಜ್ ಮತ್ತು ಡಾ.ಸುಧಾಕರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರ ರಾಜೀನಾಮೆ ಬೆನ್ನಲ್ಲೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಮ್ಮ ಬೆಂಗಾವಲು ವಾಹನ ಬಿಟ್ಟು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
ಗೃಹ ಕಚೇರಿಯಿಂದ ಜೆಪಿನಗರದ ನಿವಾಸಕ್ಕೆ ಆಗಮಿಸಿದ್ದ ಸಿಎಂ ಹೆಚ್.ಡಿ ಕುಮಾರಸ್ವಾಮಿ ನಿವಾಸದಿಂದ ಇದೀಗ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಪಕ್ಷಗಳು ಹರಸಾಹಸ ಪಡುತ್ತಿದ್ದು ಈ ನಡುವೆ ದೋಸ್ತಿ ಪಕ್ಷದ ಶಾಸಕರ ರಾಜೀನಾಮೆ ಪರ್ವ ಮುಂದುವರೆದಿದೆ.
Key words: CM HD Kumaraswamy -went- unknown -location.