ಬೆಂಗಳೂರು,ಜು,11,2019(www.justkannada.in0: ಸ್ಪೀಕರ್ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡರು ಇದ್ದ ಕಾರಣ ಪೊಲೀಸರ ಜತೆ ಬಿಜೆಪಿ ನಾಯಕರು ವಾಗ್ವಾದ ನಡೆಸಿರುವ ಘಟನೆ ನಡೆದಿದೆ.
ಸ್ಪೀಕರ್ ಕಚೇರಿಗೆ ಇಂದು ಅತೃಪ್ತ ಶಾಸಕರು ಹಾಜರಾಗಲಿದ್ದು ಈ ಹಿನ್ನೆಲೆ ವಿಧಾನಸೌಧದಲ್ಲಿ ಪೊಲೀಸ್ ಭದ್ರತೆ ವಹಿಸಲಾಗಿದೆ. ಈ ನಡುವೆ ಸ್ಪೀಕರ್ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡರು ಇದ್ದಾರೆ. ಅವರನ್ನ ಹೊರಕ್ಕೆ ಕಳುಹಿಸುವಂತೆ ಬಿಜೆಪಿ ಮುಖಂಡರು ಆಗ್ರಹಿಸಿ ಪೊಲೀಸರ ಜತೆ ಮಾತಿನ ಚಕಮಕಿಗಿಳಿದರು.ಅವಕಾಶ ನೀಡುವಂತೆ ಬಸವರಾಜ್ ಬೊಮ್ಮಾಯಿ, ವಿ.ಸೋಮಣ್ಣ, ರವಿ ಕುಮಾರ್, ಪಿ.ರಾಜೀವ್, ವಿ.ಸೋಮಣ್ಣ, ಕಾಗೇರಿ ಸೇರಿದಂತೆ ಬಿಜೆಪಿ ನಾಯಕರು ಆಗ್ರಹಿಸಿದರು.
ವಿ.ಎಸ್ ಉಗ್ರಪ್ಪ ಸೇರಿ ಅಲ್ಲಿರುವ ಕಾಂಗ್ರೆಸ್ ನಾಯಕರನ್ನ ಹೊರಗೆ ಕಳುಹಿಸಿ. ಇಲ್ಲದಿದ್ದರೇ ನಮಗೂ ಸ್ಪೀಕರ್ ಕಚೇರಿಗೆ ಪ್ರವೇಶಿಸಲು ಅವಕಾಶ ನೀಡಿ ಎಂದು ಬಿಜೆಪಿ ಮುಖಂಡರು ಆಗ್ರಹಿಸಿದ ಘಟನೆ ನಡೆಯಿತು. ಇನ್ನು ಯಾವುದೇ ಘಟನೆ ನಡೆದರೂ ತಮಗೆ ತಕ್ಷಣ ತಿಳಿಸುವಂತೆ ಸೂಚಿಸಿರುವ ಹಿನ್ನೆಲೆ ಬಿಜೆಪಿ ಶಾಸಕ ರೇಣುಕಾಚಾರ್ಯ ಸೇರಿ ಮೂವರು ಬಿಜೆಪಿ ಮುಖಂಡರು ವಿಧಾನಸೌಧದ ಕಾರಿಡಾರ್ ನಲ್ಲಿ ರೌಂಡ್ಸ್ ಹಾಕುತ್ತಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
Key words: enter – speaker’s office-BJP- leaders- clash – police