ಬೆಂಗಳೂರು, ಜೂನ್ 02, 2021 (www.justkannada.in): ಟಿ20 ವಿಶ್ವಕಪ್ ಭಾರತದಲ್ಲಿ ನಡೆಸುವ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಲು ಬಿಸಿಸಿಐಗೆ ಜೂನ್ 28ರ ವರೆಗೆ ಐಸಿಸಿ ಗಡುವು ನೀಡಿದೆ.
ಈ ಕುರಿತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾಹಿತಿ ನೀಡಿದ್ದಾರೆ. ಅಕ್ಟೋಬರ್-ನವೆಂಬರ್‌ನಲ್ಲಿ ಟಿ20 ವಿಶ್ವಕಪ್ ಭಾರತದಲ್ಲಿ ನಡೆಸಲು ಈ ಮೊದಲು ನಿರ್ಧರಿಸಲಾಗಿತ್ತು. ಆದರೆ ಕೋವಿಡ್-19 ಕಾರಣ ಈಗ ತೊಂದರೆಯಾಗಿದೆ. ಹೀಗಾಗಿ ಟಿ-20 ಭವಿಷ್ಯ ಜೂನ್ 28ಕ್ಕೆ ನಿರ್ಧರಿಸಲಾಗಿದೆ.
ಮುಂದಿನ ತಿಂಗಳು ಕೊರೊನಾ ಸೋಂಕು ಕೊಂಚ ತಗ್ಗುವ ನಿರೀಕ್ಷೆಯಿದೆ. ಐಸಿಸಿ, ಬಿಸಿಸಿಐಗೆ ಕಾಲಾವಕಾಶ ನೀಡಲಾಗಿದೆ ಎನ್ನಲಾಗಿದೆ. ಟಿ20 ವಿಶ್ವಕಪ್ ಬಗ್ಗೆ ಅಂತಿಮ ನಿರ್ಧಾರ ತಾಳಿ ಐಸಿಸಿಗೆ ತಿಳಿಸಲು ನಮಗೆ ಜೂನ್ 28ರ ವರೆಗೆ ಕಾಲಾವಕಾಶ ಇದೆ ಎಂದು ಗಂಗೂಲಿ ತಿಳಿಸಿದ್ದಾರೆ.