ಕೆಲ ಸ್ನೇಹಿತರ ಮಾತಿನಿಂದ ನೋವಾಗಿದೆ: ಮೆಗಾಸಿಟಿ ಹಗರಣದ ಬಗ್ಗೆ ಬೇಕಿದ್ರೆ ತನಿಖೆಯಾಗಲಿ- ಸಚಿವ ಸಿ.ಪಿ ಯೋಗೇಶ್ವರ್.

ರಾಮನಗರ,ಜೂನ್,2,2021(www.justkannada.in): ಮೆಗಸಿಟಿ ಹಗರಣದಲ್ಲಿ ಸಚಿವ ಸಿಪಿ ಯೋಗೇಶ್ವರ್ ರನ್ನ ಬಂಧಿಸಬೇಕು ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿಕೆ ನೀಡಿದ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಸಿಪಿ ಯೋಗೇಶ್ವರ್, ಮೆಗಾಸಿಟಿ ಹಗರಣದಲ್ಲಿ ಬೇಕಿದ್ದರೆ ತನಿಖೆಯಾಗಲಿ ಎಂದಿದ್ದಾರೆ.jk

 

ಇಂದು ರಾಮನಗರದಲ್ಲಿ ಬಿಜಿಎಸ್ ಶಾಖಾ ಮಠಕ್ಕೆ ಭೇಟಿ ನೀಡಿ ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸಿ.ಪಿ ಯೋಗೇಶ್ವರ್, ನನ್ನ ಕೆಲ ಸ್ನೇಹಿತರ ಮಾತಿನಿಂದ ನೋವಾಗಿದೆ. ಅವರ ಹಿಂದೆ ಯಾರು ಮಾತನಾಡಿಸುತ್ತಿದ್ದಾರೋ ಗೊತ್ತಿಲ್ಲ. ನಾನು ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಯಾರು ಬೇಕಾದರೂ ದೆಹಲಿಗೆ ಹೋಗಬಹುದು. ಯಾರು ಏನು ಬೇಕಾದರೂ ಮಾತನಾಡಿಕೊಳ್ಳಲಿ. ನಾನು ಸ್ವಾಮೀಜಿಗಳನ್ನ ಭೇಟಿಯಾಗುತ್ತಲೇ ಇರುತ್ತೇನೆ. ಇನ್ನು ನಾಲ್ವರು ಸ್ವಾಮೀಜಿಗಳನ್ನು ಭೇಟಿಯಾಗುತ್ತೇನೆ ಎಂದರು.

 

ನಾನು ಸಾರ್ವಜನಿಕ ಜೀವನದಲ್ಲಿದ್ದೇನೆ. ಬೇಕಿದ್ದರೇ ಮೆಗಾಸಿಟಿ ಹಗರಣದ ಬಗ್ಗೆ ತನಿಖೆಯಾಗಲಿ. ಹೆಚ್ ಡಿಕೆ, ಡಿಕೆಶಿ ಬ್ರದರ್ಸ್ ಈ ಬಗ್ಗೆ ತನಿಖೆ ಮಾಡಿಸಿದ್ದರು. ಆದರೆ ನ್ಯಾಯಾಲಯ ಕ್ಲಿಯರ್ ಮಾಡಿದೆ ಎಂದು ಸಚಿವ ಸಿ.ಪಿ ಯೋಗೇಶ್ವರ್ ತಿಳಿಸಿದರು.

Key words: Let’s -investigate – megacity –scam-Minister- C.P. Yogeshwar.