ಮೈಸೂರು,ಜು,12,2019(www.justkannada.in): ಸಂಕಷ್ಟದಲ್ಲಿರುವ ರಾಜ್ಯ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ಸಲುವಾಗಿ ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ದೇವರ ಮೊರೆ ಹೋಗಿದ್ದಾರೆ. ಹೌದು ಇಂದು ಬೆಳ್ಳಂ ಬೆಳಗ್ಗೆ ಸಚಿವ ಹೆಚ್.ಡಿ ರೇವಣ್ಣ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು.
ಅಷಾಢ ಶುಕ್ರವಾರ ಹಿನ್ನೆಲೆಎರಡನೇ ವಾರವೂ ಹೆಚ್ ಡಿ ರೇವಣ್ಣ ಚಾಮುಂಡೀಶ್ವರಿ ಆಶೀರ್ವಾದ ಪಡೆದಿದ್ದಾರೆ. ಸರ್ಕಾರ ಸುಗಮವಾಗಿ ಸಾಗಲಿ ಎಂದು ಚಾಮುಂಡೇಶ್ವರಿ ತಾಯಿ ಬಳಿ ಆಶೀರ್ವಾದ ಪಡೆದಿದ್ದು ಚಾಮುಂಡಿಯ ಸನ್ನಿದಿಯಲ್ಲಿ 20 ನಿಮಿಷಗಳ ಕಾಲ ದೇವಿಗೆ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಮಾತನಾಡಿದ ಸಚಿವ ಹೆಚ್.ಡಿ ರೇವಣ್ಣ, ಕುಮಾರಸ್ವಾಮಿ ಹೆಸರಲ್ಲಿ ಚಾಮುಂಡೇಶ್ವರಿ ಗೆ ಸಂಕಲ್ಪ ಮಾಡಿದ್ದೇವೆ. ದೇವರ ಆಶೀರ್ವಾದ ಇರುವ ವರಗೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರ್ತಾರೆ. ಚಾಮುಂಡೇಶ್ವರಿಯ ಅನುಗ್ರಹ ಕುಮಾರಸ್ವಾಮಿ ಮೇಲಿದೆ. ಸದ್ಯಕ್ಕೆ ಸರ್ಕಾರಕ್ಕೆ ಏನು ತೊಂದರೆ ಇಲ್ಲ ಎಂದರು.
ಸಾ.ರಾ ಮಹೇಶ್ ಬಿಜೆಪಿ ನಾಯಕರನ್ನ ಭೇಟಿ ಮಾಡಿರೋ ವಿಚಾರ ನನಗೆ ಗೊತ್ತಿಲ್ಲ. ಬಿಜೆಪಿ ಜೊತೆ ಅಧಿಕಾರ ಹಂಚಿಕೊಳ್ಳುವ ಬೆಳವಣಿಗೆ ಸದ್ಯಕ್ಕಿಲ್ಲ. ಇಂದಿನ ಅಧಿವೇಶನ ಕೂಡ ಸುಸೂತ್ರವಾಗಿ ನಡೆಯುತ್ತದೆ. ಇನ್ಮುಂದೆ ಎಲ್ಲವು ದೇವರ ಮಯಾ ಎಂದು ಹೆಚ್.ಡಿ ರೇವಣ್ಣ ತಿಳಿಸಿದರು.
Key words: minister- HD Revanna- visit-Chamundi Hill -today