ಬೆಂಗಳೂರು,ಜು,12,2019(www.justkannada.in) ಅತೃಪ್ತ ಶಾಸಕರು ಸ್ಪೀಕರ್ ವಿರುದ್ದ ಸಲ್ಲಿಸಿರುವ ಅರ್ಜಿ ವಿಚಾರಣೆ ಇಂದು ಸುಪ್ರೀಂಕೋರ್ಟ್ ನಲ್ಲಿ ನಡೆಯಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಇಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಲಿದ್ದು ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ನಾವು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಸಾ.ರಾ ಮಹೇಶ್ ಬಿಜೆಪಿ ಮುಖಂಡ ಭೇಟಿಗೆ ಹೊಸ ಅರ್ಥ ಬೇಡ. ಅವರ ಜೊತೆ ಸರ್ಕಾರ ನಡೆಸೋಕೆ ಆಗುತ್ತೇನ್ರಿ. ಮೊದಲೇ ನಾವು ಜೆಡಿಎಸ್ ಜೊತೆ ಸರ್ಕಾರ ಮಾಡಿ ಸೋತು ಹೋಗಿದ್ದೇವೆ . ಇನ್ನು ಸಾಧ್ಯವಿಲ್ಲ. ಅವರ ಭೇಟಿ ಕೋ ಇನ್ಸಿಡೆಂಟ್ ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.
ಸುಪ್ರೀಂ ಕೋರ್ಟ್ ತೀರ್ಪಿನ ಮೇಲೆ ನಮ್ಮ ಗಮನ ಇದೆ. ಸೋಮವಾರದಿಂದ ಸದನದಲ್ಲಿ ಏನು ಮಾಡಬೇಕು ಅನ್ನೋದನ್ನು ತೀರ್ಮಾನಿಸುತ್ತೇವೆ ಎಂದು ಬಿಎಸ್ ಯಡಿಯೂರಪ್ಪ ತಿಳಿಸಿದರು.
Key words: Our next -decision -after – Supreme Court – BS Yeddyurappa