ಭಾರತದ ಆರ್ಥಿಕತೆ ಕುರಿತ ವಿಶ್ವಬ್ಯಾಂಕ್ ಶಾಕಿಂಗ್ ವರದಿ!

ಬೆಂಗಳೂರು, ಜೂನ್ 09, 2021 (www.justkannada.in): 2020ರಲ್ಲಿ ಭಾರತದ ಆರ್ಥಿಕತೆಯು ಶೇಕಡಾ 7.3ರಷ್ಟು ಕುಗ್ಗಿದೆ.

ಈ ಕುರಿತು ವಿಶ್ವಬ್ಯಾಂಕ್ ಅಂದಾಜು ವರದಿ ಪ್ರಕಟಿಸಿದೆ. ಭಾರತದ ಆರ್ಥಿಕತೆಯು 2021-2022ರಲ್ಲಿ ಶೇ.8.3ರಷ್ಟು ಇರಲಿದೆ ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ.

2020ರಲ್ಲಿ ಭಾರತದ ಆರ್ಥಿಕತೆಯು ಶೇಕಡಾ 7.3ರಷ್ಟು ಕುಗ್ಗಿದ್ದು,  2023ರಲ್ಲಿ ಶೇಕಡಾ 6.5ರಷ್ಟು ಬೆಳವಣಿಗೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದೆ.

ಕೊರೋನಾ ಎರಡನೇ ಅಲೆ ಭಾರತದ ಆರ್ಥಿಕತೆ ಚೇತರಿಕೆಗೆ ಅಡ್ಡಿಯಾಗುತ್ತಿದೆ ಎಂದು ವಿಶ್ವಸಂಸ್ಥೆ ಹೇಳಿದೆ.  ಏಕಾಏಕಿ ಆರೋಗ್ಯ ಮತ್ತು ಆರ್ಥಿಕ ವೆಚ್ಚಗಳನ್ನು ಪರಿಹರಿಸಲು ಮತ್ತಷ್ಟು ಉದ್ದೇಶಿತ ನೀತಿ ಬೆಂಬಲ ಬೇಕಾಗಬಹುದು ಎಂದು ವಿಶ್ವಬ್ಯಾಂಕ್ ಹೇಳಿದೆ.