ಬೆಂಗಳೂರು, ಜೂನ್ 10, 2021 (www.justkannada.in): ವಿಶ್ವನಾಥ್ ಆನಂದ್ ಜೊತೆ ನಟ ಅಮೀರ್ ಖಾನ್ ಚೆಸ್ ಆಡಲಿದ್ದಾರೆ!
ಹೌದು. ಚೆಸ್.ಕಾಮ್ ಸಂಸ್ಥೆ ‘ಚೆಕ್‌ಮೆಟ್ ಕೋವಿಡ್’ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಿದೆ. ಇದರಲ್ಲಿ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ.
ಜೂನ್ 13 ರಂದು ಇದು ನಡೆಯಲಿದ್ದು, ಭಾರತ ಚೆಸ್ ಮಾಸ್ಟರ್ ವಿಶ್ವನಾಥ್ ಆನಂದ್ ಎದುರು ಸೆಲೆಬ್ರಿಟಿಗಳು ಚೆಸ್ ಆಡಲಿದ್ದಾರೆ.
ಅಮೀರ್ ಖಾನ್ ಮತ್ತು ವಿಶ್ವನಾಥ್ ಅನಂದ್ ಪಂದ್ಯವನ್ನು ಹಿಂದಿ ಚಿತ್ರರಂಗದ ಮತ್ತೊಬ್ಬ ಖ್ಯಾತ ನಟ ಹೃತಿಕ್ ರೋಷನ್ ಪ್ರಚಾರ ಮಾಡುತ್ತಿದ್ದಾರೆ.