ಮೈಸೂರು, ಜೂನ್ 13, 2021 (www.justkannada.in): ಮೈಸೂರಿನಲ್ಲಿ ಭೂ ಮಾಫಿಯಾ ವಿರುದ್ಧ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದ್ದಾರೆ.
ಭೂ ಹಗರಣವನ್ನ ಬಿಎಸ್ವೈ ನಿಯಂತ್ರಣಕ್ಕೆ ತರಲಾರರು. ರೋಹಿಣಿ ಸಿಂಧೂರಿ ಅವರನ್ನ ಇದೆ ಕಾರಣಕ್ಕೆ ವರ್ಗಾವಣೆ ಮಾಡಿದ್ದಾರೆ. ಒಂದು ಸಮಿತಿ ರಚಿಸಿ ರೋಹಿಣಿ ಸಿಂಧೂರಿ ಒಬ್ಬರನ್ನೇ ತನಿಖೆ ಮಾಡುವಂತೆ ನೇಮಕ ಮಾಡಬೇಕು.
ಆಗ ಮಾತ್ರ ಮೈಸೂರನ್ನ ಭೂ ಮಾಫಿಯಾ ದಿಂದ ರಕ್ಷಿಸಲು ಸಾಧ್ಯ ಎಂದು ವಾಟಾಳ್ ಹೇಳಿದ್ದಾರೆ.
ಈ ಕೂಡಲೇ ಸಿಎಂ ಯಡಿಯೂರಪ್ಪ ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಅವರನ್ನ ನೇಮಕಗೊಳಿಸಿ. ಮುಡಾ ಅಧ್ಯಕ್ಷ ಹೆಚ್.ವಿ ರಾಜೀವ್ ಈ ಕೂಡಲೇ ರಾಜೀನಾಮೆ ನೀಡಬೇಕು. ಭೂ ಹಗರಣ ಪ್ರಕರಣದಲ್ಲಿ ಮುಡಾ ಅಧ್ಯಕ್ಷ ಹೆಸರು ಪ್ರಸ್ತಾಪವಾಗಿದೆ. ಮುಡಾ ಅಧ್ಯಕ್ಷರನ್ನಾಗಿಸುವುದು ರಿಯಲ್ ಎಸ್ಟೇಟ್ ಮಾಡುವುದಕ್ಕೆ ಅಲ್ಲ. ಈ ಕೂಡಲೇ ರಾಜೀನಾಮೆ ನೀಡಬೇಕು. ಮುಡಾ ಅಧ್ಯಕ್ಷರಾಗಿ ಮುಂದುವರಿಯಲು ರಾಜೀವ್ ಅರ್ಹರಲ್ಲ ಎಂದು ಮೈಸೂರಿನಲ್ಲಿ ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.
ನಾನು ಮುಖ್ಯಮಂತ್ರಿ ಆದರೆ ಭೂ.ಖನಿಜ ಕಳ್ಳರನ್ನು ಜೈಲಿಗೆ ಕಳುಹಿಸುತ್ತೇನೆ. ನನಗೆ 5 ವರ್ಷ ಆಡಳಿತ ಬೇಕಾಗಿಲ್ಲ, 5 ತಿಂಗಳು ಅವಕಾಶ ನೀಡಿದ್ರೆ ಸಾಕು. ನಾನು ಸಿಎಂ ಆದರೆ ಬಸವಣ್ಣ ತತ್ವ ಆದರ್ಶ ಪಾಲಿಸುವ ಪ್ರಮಾಣಿಕರನ್ನ ಸಂಪುಟಕ್ಕೆ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಮೊದಲು ಮಾಡುವ ಕೆಲಸ ಅಂದ್ರೆ ರಾಜ್ಯದಲ್ಲಿ ಆಗಿರುವ ಭೂ ಒತ್ತುವರಿ, ಖನಿಜ ಕಳ್ಳರನ್ನು, ಖಾಸಗಿ ಶಿಕ್ಷಣ ಸಂಸ್ಥೆಗಳನ್ನ ತೀವ್ರವಾಗಿ ತನಿಖೆಗೆ ಒಪ್ಪಿಸುತ್ತೇನೆ. ನನಗೆ ಕೆಲವ 5 ತಿಂಗಳು ಅವಕಾಶ ಸಿಕ್ಕರೆ ಸಾಕು ಅಷ್ಟೇ ಎಂದು ಮೈಸೂರಿನಲ್ಲಿ ಮಾಜಿ ಶಾಸಕ ವಾಟಾಳ್ ನಾಗರಾಜ್ ಹೇಳಿದ್ದಾರೆ.