ಬೆಂಗಳೂರು,ಜು,12,2019(www.justkannada.in): ನಾವೆಲ್ಲಾ ಚರ್ಚಿಸಿಯೇ ವಿಶ್ವಾಸ ಮತ ಯಾಚನೆಗೆ ನಿರ್ಧರಿಸಿದ್ದೇವೆ. ನಾವು ಯಾವುದೇ ರೀತಿ ಆಪರೇಷನ್‌ಗೆ ಮಾಡಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸಭಾ ಕಲಾಪ ಮುಗಿದ ಬಳಿಕ ವಿಧಾನಸೌಧದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಿದ್ದರಾಮಯ್ಯ, ವಿಶ್ವಾಸ ಮತಯಾಚನೆಗೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಮುಖ್ಯಮಂತ್ರಿಗಳು ಉಭಯ ಪಕ್ಷಗಳು ಚರ್ಚೆ ನಡೆಸಿದ ಬಳಿಕವೇ ವಿಶ್ವಾಸ ಮತ ಯಾಚನೆ ಮಾಡುವುದಾಗಿ ಹೇಳಿದ್ದಾರೆ. ಬಹುಮತವಿಲ್ಲದೇ ವಿಶ್ವಾಸಮತ ಯಾಚನೆ ಮಾಡಲು ಆಗುತ್ತಾ ? ಹೇಗೆ ಆಗುತ್ತದೆ ಎನ್ನುವುದು ಹೇಳುವುದಕ್ಕೆ ಆಗುತ್ತದಾ? ಎಂದರು.
ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಮತ್ತು ಇಬ್ಬರು ಶಾಸಕರ ಅನರ್ಹತೆ ಬಗ್ಗೆ ಸ್ಪೀಕರ್ ನಿರ್ಧಾರ ಮಾಡುತ್ತಾರೆ. ಮುಂಬೈಗೆ ಹೋಗಿರುವುದು 10 ಶಾಸಕರು ಮಾತ್ರ. ರಾಮಲಿಂಗಾ ರೆಡ್ಡಿ, ಎಂಟಿಬಿ ನಾಗರಾಜ್ ಅವರು ಮುಂಬೈಗೆ ಹೋಗಿಲ್ಲ, ಶಾಸಕರ ಅನರ್ಹತೆಗೆ ನಾವು ದೂರು ನೀಡಿದ್ದೇವೆ. ಆ ಬಗ್ಗೆ ಸ್ಪೀಕರ್ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
Key words: We are not –operation- Former CM- Siddaramaiah – confidence vote.