ಬೆಂಗಳೂರು:ಜುಲೈ-13:(www.justkannada.in) ರಾಮಲಿಂಗಾ ರೆಡ್ಡಿ ರಾಜೀನಾಮೆ ಬಳಿಕ ಹಲವಾರು ಬಿಜೆಪಿ ನಾಯಕರು ರಾಮಲಿಂಗಾ ರೆಡ್ಡಿ ಭೇಟಿ ಮಾಡಿದ್ದು, ರೆಡ್ದಿ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಇಂದು ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಕೂಡ ರಾಮಲಿಂಗಾ ರೆಡ್ಡಿ ಭೇಟಿಮಾಡಿರುವುದು ಇನ್ನಷ್ಟು ಕುತೂಹಲವನ್ನು ಹೆಚ್ಚಿಸಿದೆ.
ಆದರೆ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಹಿಂದೆ ಯಾವುದೇ ರಾಜಕೀಯ ಉದ್ದೇಶಗಳಿಲ್ಲ ಎಂದಿರುವ ವಿಶ್ವನಾಥ್, ರಾಮಲಿಂಗಾ ರೆಡ್ಡಿ ಒಂದು ಬಂಡೆ ಇದ್ದಂತೆ. ನಮ್ಮಿಂದ ಅವರ ನಿರ್ಧಾರ ಬದಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ರಾಜಕೀಯದ ಬಗ್ಗೆ ಚರ್ಚಿಸಲು ರೆಡ್ಡಿಯವರನ್ನು ಭೇಟಿಯಾಗಿಲ್ಲ. ರೆಡ್ಡಿ ಸಂಘದ ಚುನಾವಣೆ ಹಿನ್ನಲೆಯಲ್ಲಿ ಚರ್ಚೆಗೆ ಬಂದಿದ್ದೇವೆ ಅಷ್ಟೇ. ಈ ಭೇಟಿ ಹಿಂದೆ ಯಾವುದೇ ರಾಜಕೀಯ ಉದ್ದೇಶಗಳಿಲ್ಲ. ರಾಮಲಿಂಗಾ ರೆಡ್ಡಿ ಬಂಡೆಯಿದ್ದಂತೆ ಅವರನ್ನು ಬದಲಿಸಲು ನಮ್ಮಿಂದಾಗದು. ಅವರ ನಿರ್ಧಾರ ಅವರಿಗೆ ಎಂದಿದ್ದಾರೆ.
ಸಿಎಂ ಹೆಚ್ ಡಿ ಕುಮಾರಸ್ವಾಮಿ ಬಳಿ ನಂಬರ್ ಇಲ್ಲ. ಹೀಗಾಗಿ ವಿಶ್ವಾಸ ಮತ ಯಾಚನೆಗೆ ಮುಂದಾಗಿದ್ದಾರೆ. ಅವರಿಂದ ನಂಬರ್ ಗೇಮ್ ಆಡಲು ಸಾಧ್ಯವಿಲ್ಲ. ಸಿಎಂ ಗೌರವಯುತವಾಗಿ ನಿರ್ಗಮಿಸಬೇಕು ಎಂದು ತಿಳಿಸಿದರು.