ಮೈಸೂರು,ಜೂನ್,18,2021(www.justkannada.in): ನೀರಾವರಿ ಇಲಾಖೆ ಯಲ್ಲಿ 21,764 ಕೋಟಿ ಹಣ ದುರುಪಯೋಗವಾಗಿದೆ. ವಿಶ್ವನಾಥ್ ಆರೋಪ ನೂರಕ್ಕೆ ನೂರು ಸತ್ಯ ಇದೆ. ಇದರಲ್ಲಿ ಕೇಂದ್ರದ ಪಾಲು ಇದೆ. ಈ ಬಗ್ಗೆ ಹೈಕೋರ್ಟ್, ಇಡಿ, ಸಿಬಿಐಗೆ ದೂರು ಕೊಡ್ತೇವೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ತಿಳಿಸಿದರು.
ಮೈಸೂರಿನಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಎಂ. ಲಕ್ಷ್ಮಣ್, ನೀರಾವರಿ ಇಲಾಖೆ ಎಲ್ಲ ಇಲಾಖೆಯ ಅಣ್ಣ. ರಮೇಶ್ ಜಾರಕಿಹೊಳಿ ಬಳಿ ಈ ಇಲಾಖೆ ಇತ್ತು. ಈಗ ಸಿಎಂ ಬಳಿ ಈ ಖಾತೆ ಇದೆ. ನೀರಾವರಿ ಇಲಾಖೆಯಲ್ಲಿ ಸರಿಯಾಗಿ ಟೆಂಡರ್ ಕರೆಯದೆ ಟೆಂಡರ್ ಫೈನಲ್ ಆಗಿದೆ. 21 ಸಾವಿರದ 764 ಕೋಟಿ ಹಣ ದುರುಪಯೋಗ ಆಗಿದೆ. 100ಕೋಟಿಗೂ ಹೆಚ್ಚಿನ ಯೋಜನೆ ಇದ್ದರೆ ಟೆಂಡರ್ ಕರೆಯಬೇಕು. ಇದಕ್ಕೆ ಆದ ಸರಿಯಾದ ಮಾರ್ಗಸೂಚಿ ಇದೆ. ಅದೆಲ್ಲವನ್ನು ಬಿಟ್ಟು ನೇರವಾಗಿ ರಾಜ್ಯ ಸರ್ಕಾರ ಟೆಂಡರ್ ಕೊಟ್ಟಿದೆ. ಈಗಾಗಲೇ ಇದರಲ್ಲಿ ನಾಲ್ಕು ಸಾವಿರ ಕೋಟಿ ಟೆಂಡರ್ ದಾರನಿಗೆ ಕೊಟ್ಟಿದ್ದಾರೆ. ಇದನ್ನ ಆಂಧ್ರಪ್ರದೇಶ್, ಗುಜರಾತ್ ನಲ್ಲಿನ ಕಾಂಟ್ರಾಕ್ಟ್ ದಾರರಿಗೆ ಕೊಟ್ಟಿದ್ದಾರೆ. 10 ಪರ್ಸೆಂಟ್ ಕಮಿಷನ್ ಕೊಟ್ಟಿದ್ದಾರೆಂದು ಬಿಜೆಪಿ ಮುಖಂಡರೇ ಹೇಳಿದ್ದಾರೆ.
ಇದು ರಸ್ತೆಯಲ್ಲಿ ಹೇಳಿದ ಮಾತಲ್ಲ, ಬಿಜೆಪಿ ಕಚೇರಿಯಲ್ಲಿ ಹೇಳಿದ ಮಾತು. ಬಿಜೆಪಿಯವರನ್ನ ಕರೆಪ್ಟ್ ಬಾಸ್ಟೆಡ್ಸ್ ಅಂತ ಹೇಳಿದ್ದಾರೆ. ಸ್ವತಹ ಬಿಜೆಪಿ ಮುಖಂಡ H.ವಿಶ್ವನಾಥ್ ಅವರೇ ಹೇಳಿದ್ದಾರೆ. ಪ್ರಧಾನಿ ಮೋದಿ ಅವರೇ ನಿಮಗೆ ನಾಚಿಕೆ ಮಾನ ಮರ್ಯಾದೆ ಇದೆಯಾ.? ಎಂದು ಎಂ.ಲಕ್ಷ್ಮಣ್ ಕಿಡಿಕಾರಿದರು.
ಈ ಟೆಂಡರ್‌ನಲ್ಲಿ ಕೇಂದ್ರಕ್ಕೂ ಪಾಲು ಹಂಚಿಕೆಯಾಗಿದೆ. ಇದನ್ನ ನಾವು ಹೇಳ್ತಿರೋದಲ್ಲ ನಿಮ್ಮದೇ ಮುಖಂಡರು ಹೇಳಿದ ಮಾತು. ಇದರ ವಿರುದ್ಧ ನಾವು ಹೈಕೋರ್ಟ್, ಇಡಿ, ಸಿಬಿಐಗೆ ದೂರು ಕೊಡ್ತೇವೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಹೇಳಿದರು.
ನಿಮ್ಮ ಆರೋಗ್ಯ ಸಚಿವರ ಸ್ಥಾನ ಕಿತ್ತುಕೊಂಡ ಕಟ್ಟಪ್ಪ ಯಾರು ಶ್ರೀರಾಮುಲು ಅವರೇ..?
ನಿಮ್ಮ ಪಕ್ಷದ ಕಟ್ಟಪ್ಪ ಯಾರು ಶ್ರೀರಾಮುಲು ಅವರೇ. ನಿಮ್ಮ ಆರೋಗ್ಯ ಸಚಿವರ ಸ್ಥಾನ ಕಿತ್ತುಕೊಂಡ ಕಟ್ಟಪ್ಪ ಯಾರು. ಸರಿಯಾಗಿ ಕೋವಿಡ್ ನಿರ್ವಹಣೆ ಮಾಡ್ತಿಲ್ಲ ಎಂದು ಮಾಧ್ಯಮದವರು ಕೇಳಿದ್ರೆ. ಅದಕ್ಕೆ ನೀವೂ ಕೊಡೋ ಉತ್ತರ ಬಾಹುಬಲಿ ಕಥೆ. ಸಿದ್ದರಾಮಯ್ಯ ಬಾಹುಬಲಿ- ಅವರ ಹಿಂದೆ ಕಟ್ಟಪ್ಪನಂತೆ ಕತ್ತಿ ಹಿಡಿದು ನಿಂತಿದ್ದಾರೆ ಅಂತೀರಾ. ಹೇಳುವ ವಿಚಾರಕ್ಕು ನೀವೂ ಕೊಡುವ ಉತ್ತರಕ್ಕು ಸಂಬಂಧವೇ ಇಲ್ಲ. ಇನ್ನು ಎಷ್ಟು ದಿನ ಹೀಗೆ ವಿಚಾರವನ್ನ ಡೈವರ್ಟ್ ಮಾಡ್ತೀರಾ.! ಜನರು ನೋಡ್ತಿದ್ದಾರೆ ನಿಮಗೆ ತಕ್ಕ ಪಾಠ ಕಲಿಸ್ತಾರೆ ಎಂದು ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಸರ್ಕಾರ ಸತ್ತಿದೆ. ಯಡಿಯೂರಪ್ಪ ಅನ್ನೋ ವೆಂಟಿಲೇಟರ್ ಮೂಲಕ ಉಸಿರಾಡುತ್ತಿದೆ. ರಾಷ್ಟ್ರಮಟ್ಟದಲ್ಲಿ ರಾಜ್ಯದ ಮಾನ ಹರಾಜಾಗುತ್ತಿದೆ ಎಂದು ಕಿಡಿಕಾರಿದರು.
Key words: Irrigation Department – central – tender- KPCC spokesperson -M. Laxman -alleges.