ನವದೆಹಲಿ,ಜೂನ್,21,2021(www.justkannada.in): ಸಿದ್ಧರಾಮಯ್ಯ ಭಾವಿ ಸಿಎಂ ಎಂಬ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಇದು ಚಿಕ್ಕ ವಿಚಾರ ಲೆಕ್ಕಕ್ಕೆ ಇಟ್ಟು ಕೊಳ್ಳಲ್ಲ. ಹೈಕಮಾಂಡ್ ಗಮನಕ್ಕೆ ತರುವಂತಹ ಹೇಳಿಕೆ ಅಲ್ಲ. ಹೈಕಮಾಂಡ್ ಗಮನಕ್ಕೆ ತರುವಷ್ಟು ದೊಡ್ಡ ಹೇಳಿಕೆ ಅಲ್ಲ ಎಂದು ತಿಳಿಸಿದ್ದಾರೆ.
ನವದೆಹಲಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ನಲ್ಲಿ ಈಗ ಸಿಎಂ ಸ್ಥಾನ ಖಾಲಿ ಇಲ್ಲ. ಸಿಎಂ ಯಾರೆಂಬುದನ್ನ ದೆಹಲಿಯಲ್ಲಿ ಹೈಕಮಾಂಡ್ ತೀರ್ಮಾನ ಮಾಡುತ್ತಾರೆ. ಕಾಂಗ್ರೆಸ್ ನಲ್ಲಿ ಯಾವುದೇ ಗುಂಪು ಇಲ್ಲ. ನಮ್ಮಲ್ಲಿ ಇರುವುದು ಕಾಂಗ್ರೆಸ್ ಗುಂಪು ಮಾತ್ರ ಎಂದರು.
ನಾನು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ದೆಹಲಿಗೆ ಬಂದಿರಲಿಲ್ಲ. ಈಗ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಭೇಟಿಗೆ ಸಮಯ ಕೇಳಿದ್ದೇನೆ. ಸಮಯ ಕೊಟ್ಟರೆ ಭೇಟಿಯಾಗುತ್ತೇನೆ ಪದಾಧಿಕಾರಿಗಳು ಜಿಲ್ಲಾಧ್ಯಕ್ಷರ ಬದಲಾವಣೆಗೆ ಮನವಿ ಮಾಡುತ್ತೇನೆ. ಕಳೆದ ಒಂದು ವರ್ಷದಿಂದ ಎಲ್ಲವನ್ನೂ ಗಮನಿಸಿದ್ದೇನೆ. ಯಾರೂ ಕೆಲಸ ಮಾಡಿದ್ದಾರೆ ಮಾಡಿಲ್ಲ ಎಂದು. ಹೀಗಾಗಿ ಕೆಲಸ ಮಾಡದವರನ್ನ ತೆಗೆಯಲು ನಿರ್ಧರಿಸಿದ್ದೇವೆ. ಹೀಗಾಗಿ ಈ ಬಗ್ಗೆ ಚರ್ಚಿಸುತ್ತೇನೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.
ಇದು ಮುಖ್ಯಮಂತ್ರಿ ಸ್ಥಾನದ ಬಗ್ಗೆ ಮಾತನಾಡುವ ಸಮಯ ಅಲ್ಲ. ಬಿಬಿಎಂಪಿ ಜಿ.ಪಂ ಚುನಾವಣೆ ಮೊದಲು ಗೆಲ್ಲಬೇಕು. ಸಿಎಂ ಸ್ಥಾನದ ಬಗ್ಗೆ ಬಿಜೆಪಿಯವರು ಮಾತನಾಡಬೇಕು. ನಮ್ಮ ಪಕ್ಷದವರು ಮಾತನಾಡಬಾರದು ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.
Key words: KPCC President -DK Sivakumar -reacted – statement – Siddaramaiah – CM.