ಮೈಸೂರು,ಜೂನ್,23,2021(www,justkannada.i): ಪ್ರಾಣಿ ದತ್ತು ತೆಗೆದುಕೊಳ್ಳುವಂತೆ ವೀಡಿಯೋ ಮೂಲಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರೆ ನೀಡಿದ್ದರು. ಇದೀಗ ನಟ ದರ್ಶನ್ ಕರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ.
ಹೌದು, ಪ್ರಾಣಿಪ್ರಿಯರು ಮೃಗಾಲಯಗಳಿಗೆ ನೆರವು ನೀಡಿದ್ದು, ಈ ಹಿನ್ನೆಲೆ ಮೃಗಾಲಯಕ್ಕೆ 3 ರೂ. ಕೋಟಿ ದೇಣಿಗೆ ಹರಿದು ಬಂದಿದೆ. ಈ ಕುರಿತು ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ರಾಜ್ಯದ 9 ಮೃಗಾಲಯಗಳಿಗೆ ಪ್ರಾಣಿ ಪ್ರಿಯರಿಂದ ನೆರವು ಸಿಕ್ಕಿದೆ. Zoos ಆ್ಯಪ್ ಕರ್ನಾಟಕ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮಾಡಲಾಗುತ್ತಿದ್ದು, ಸುಮಾರು 6ಸಾವಿರಕ್ಕೂ ಅಧಿಕ ಜನರು ಪ್ರಾಣಿ ದತ್ತು ಸ್ವೀಕಾರ ಮಾಡಿದ್ದಾರೆ.
ಕೋವಿಡ್ ಸಮಯದಲ್ಲಿ ಪ್ರಾಣಿಪ್ರಿಯರು ಮೃಗಾಲಯದ ನೆರವಿಗೆ ನಿಂತಿದ್ದು, ಕೇವಲ 20 ದಿನಗಳಲ್ಲಿ ಎರಡು ಕೋಟಿ ದೇಣಿಗೆ ಸಂಗ್ರಹವಾಗಿದೆ. ಒಟ್ಟು ಮೂರು ಕೋಟಿ ದಾಖಲೆ ದೇಣಿಗೆ ಹರಿದು ಬಂದಿದ್ದು, ಪ್ರಾಣಿ ದತ್ತು ಪಡೆದವರಿಗೆ ನಟ ದರ್ಶನ್ ಭೇಟಿ ಮಾಡುವ ಅವಕಾಶವಿರಲಿದೆ. ಪ್ರತಿ ಮೃಗಾಲಯದಲ್ಲಿ ಆಯ್ದ 50 ಜನರಿಗೆ ದರ್ಶನ್ ರಿಂದ ಪ್ರಶಂಸನಾ ಪತ್ರ ನೀಡಲಾಗುತ್ತದೆ ಎಂದು ಎಲ್.ಆರ್.ಮಹದೇವಸ್ವಾಮಿ ತಿಳಿಸಿದರು.
ದರ್ಶನ್ ಮನವಿಗೆ ಓಗೊಟ್ಟು ಚಿತ್ರ ನಟರೂ ಪ್ರಾಣಿಗಳ ದತ್ತು ಸ್ವೀಕಾರ ಮಾಡಿದ್ದಾರೆ. ಈ ಮೂಲಕ ಮೃಗಾಲಯದ ಎಲ್ಲಾ ಪ್ರಾಣಿಗಳೂ ದತ್ತ ಪಡೆದಿದ್ದಾರೆ. ಪ್ರಾಣಿಪ್ರಿಯರು ಹೆಚ್ಚಾಗಿ ನವಿಲು ಹಾಗೂ ನಾಗರಹಾವನ್ನೇ ದತ್ತು ಪಡೆದಿದ್ದಾರೆ. ಇನ್ನು ಇಂದಿನಿಂದ ಬೆಳಗಾವಿ, ಗದಗ್ ಹಾಗೂ ಹಂಪಿ ಜೂ ಓಪನ್ ಆಗಲಿದ್ದು, ಕೋವಿಡ್ ಸುರಕ್ಷತಾ ಕ್ರಮಗಳೊಂದಿಗೆ ಪ್ರವಾಸಿಗರಿಗೆ ಮುಕ್ತವಾಗಲಿದೆ. ಸ್ಥಳದಲ್ಲೇ ಕೋವಿಡ್ ಪರೀಕ್ಷೆ ನಡೆಸಿ ಮೃಗಾಲಯ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ ಎಂದು ಎಲ್.ಆರ್.ಮಹದೇವಸ್ವಾಮಿ ತಿಳಿಸಿದರು.
ನಿರ್ಮಾಪಕ ದಿವಂಗತ ಕೋಟಿ ರಾಮು ನೆನಪಿನಲ್ಲಿ ಮಗಳು ಕಾರುಣ್ಯ ರಾಮ್ ಹೆಸರಿನಲ್ಲಿ ಹಿರಿಯ ನಟಿ ಮಾಲಾಶ್ರೀ ಅವರ ಕುಟುಂಬ ಚಿರತೆಯನ್ನ ದತ್ತು ಪಡೆದಿದೆ.
Key words: support -actor – Darshan- call-zoo – Rs 3 crore- LR Mahadevasamy- Zoo Authority