ಬೆಂಗಳೂರಿನಲ್ಲಿ ಮಾಜಿ ಕಾರ್ಪೋರೇಟರ್ ಹತ್ಯೆ.

ಬೆಂಗಳೂರು,ಜೂನ್,24,2021(www.justkannada.in):  ದುಷ್ಕರ್ಮಿಗಳು ಮಾಜಿ ಕಾರ್ಪೋರೇಟರ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆಗೈದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆಯಾದ ಮಾಜಿ ಕಾರ್ಪೋರೇಟರ್. ಬೆಂಗಳೂರಿನ ಛಲವಾದಿ ಪಾಳ್ಯ ವಾರ್ಡ್ ನ ಮಾಜಿ ಕಾರ್ಪೋರೇಟರ್ ಆಗಿದ್ದರು. ಇಂದು ಬೆಳಿಗ್ಗೆ ಫ್ಲವರ್ ಗಾರ್ಡನ್ ನಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿದ್ಧ ರೇಖಾ ಕದಿರೇಶ್ ಅವರನ್ನ ಹೊರಗೆ ಕರೆದು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.

ಬಳಿಕ ರೇಖಾ ಕದಿರೇಶ್ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆದರೆ ಚಿಕಿತ್ಸೆ ಫಲಿಸದೆ ರೇಖಾ ಕದಿರೇಶ್ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ  ಚಿಕ್ಕಪೇಟೆ ಎಸಿಪಿ ಹಾಗೂ ಕಾಟನ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

2018 ಫೆಬ್ರವರಿ 8 ರಂದು ರೇಖಾ ಕದಿರೇಶ್ ಅವರ ಪತಿ ಕದಿರೇಶ್ ಅವರನ್ನೂ ಸಹ ದುಷ್ಕರ್ಮಿಗಳು ಕೊಲೆ ಮಾಡಿದ್ದರು.

ENGLISH SUMMARY…

Former Bengaluru Corporator murdered
Bengaluru, June 24, 2021 (www.justkannada.in): In a gruesome incident, a former Corporator in Bengaluru was killed by miscreants.
The deceased is identified as Rekha Kadiresh, who was a former corporator from Chalwadipalya ward. The incident is reported to be have taken place in Flower Garden in Bengaluru today morning. The criminals dragged Rekha Kadiresh out of her house and attacked her with weapons.
She was admitted to the hospital but she succumbed to the injuries, according to the police. Chikpet ACP and Cottonpet Police are investigating.
Rekha’s husband Kadiresh was also murdered by miscreants on February 8, 2018.
Keywords: Former Corporator/ Rekha Kadiresh/ murder/ killed/ Bengaluru

Key words:  former corporator – Bengaluru – attacking -murder