ಮೈಸೂರು,ಜೂನ್,24,2021(www.justkannada.in): ಲಾಕ್ ಡೌನ್ ತೆರವುಗೊಳಿಸಿ ಹೋಟೆಲ್ ಉದ್ಯಮಕ್ಕೆ ಅವಕಾಶ ಕಲ್ಪಿಸುವಂತೆ ಹೋಟೆಲ್ ಉದ್ಯಮಿ ಡಾ.ಶ್ವೇತಾ ಮಡಪ್ಪಾಡಿ ಒತ್ತಾಯ ಮಾಡಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೋಟೆಲ್ ಉದ್ಯಮಿ ಡಾ.ಶ್ವೇತಾ ಮಡಪ್ಪಾಡಿ, ಲಾಕ್ ಡೌನ್ ನಿಂದ ಹೋಟೆಲ್ ಉದ್ಯಮ ನೆಲಕಚ್ಚಿದೆ. ಕೇವಲ ಪಾರ್ಸೆಲ್ ಗೆ ಅವಕಾಶ ನೀಡಿರುವುದರಿಂದ ಗ್ರಾಹಕರಿಲ್ಲದೆ ಹೋಟೆಲ್ ನಿರ್ವಹಣೆ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರ ಕೂಡಲೇ ಲಾಕ್ ಡೌನ್ ತೆರವುಗೊಳಿಸಿ ಪೂರ್ಣ ಪ್ರಮಾಣದಲ್ಲಿ ಹೋಟೆಲ್ ಆರಂಭಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ತೆರಿಗೆ ಮತ್ತು ಕಟ್ಟಡ ತೆರಿಗೆ ಸೇರಿ ವಿದ್ಯುತ್ ಮತ್ತು ನೀರಿನ ಶುಲ್ಕದ ಮೇಲೆ ವಿನಾಯಿತಿ ನೀಡಬೇಕು. ಕಾರ್ಮಿಕರಿಗೆ ಉಚಿತ ಆರೋಗ್ಯ ಸೇವೆ ಒದಗಿಸಬೇಕು. ಹೋಟೆಲ್ ಕಾರ್ಮಿಕರಿಗೆ ಉಚಿತ ವಿಮಾ ಯೋಜನೆ ನೀಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಡಾ.ಶ್ವೇತಾ ಮಡಪ್ಪಾಡಿ ಒತ್ತಾಯಿಸಿದರು.
Key words: Request -clear – lock-down -accommodate – hotel industry-mysore