ಬೆಂಗಳೂರು,ಜೂನ್,25,2021(www.justkannada.in): ರಾಜ್ಯದಲ್ಲಿ ಕೊರೋನಾ ಇಳಿಕೆಯಾದ ಹಿನ್ನೆಲೆ ಅನ್ ಲಾಕ್ ಮಾಡಲಾಗಿದ್ದು ವಿಕೇಂಡ್ ಕರ್ಫ್ಯೂ ಜಾರಿಯಲ್ಲಿದೆ, ಈ ಮಧ್ಯೆ ವಿಕೆಂಡ್ ಕರ್ಫ್ಯೂನಲ್ಲಿ ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
ಕಳೆದ ಬಾರಿ ವಿಕೆಂಡ್ ಕರ್ಫ್ಯೂನಲ್ಲಿ ಬಸ್ ಸಂಚಾರಕ್ಕೆ ಅವಕಾಶ ಇರಲಿಲ್ಲ. ಈ ಸಂಬಂಧ ಮಾತನಾಡಿರುವ ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಪಕ ರಾಜೇಶ್, ಜನರ ಅನುಕೂಲಕ್ಕಾಗಿ ವಿಕೇಂಡ್ ಕರ್ಫ್ಯೂನಲ್ಲೂ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳ ಓಡಾಟ ನಡೆಸಲಿವೆ ಎಂದಿದ್ದಾರೆ.
‘ಜನರ ಅನುಕೂಲಕ್ಕಾಗಿ ನಾಳೆಯಿಂದಲೇ ಬಸ್‌ಗಳು ಸಂಚಾರಿಸಲಿವೆ. ಬೆಳಿಗ್ಗೆ 6 ರಿಂದ 7 ಗಂಟೆಯವರೆಗೆ ಬಸ್‌ಗಳು ಓಡಾಡಲಿವೆ. ಇನ್ನು ವೀಕೆಂಡ್ ಕರ್ಫ್ಯೂನಲ್ಲಿ ಪ್ರಯಾಣಿಕರ ಓಡಾಟ ಕಡಿಮೆ ಇರುತ್ತೆ. ಹೀಗಾಗಿ ನಾಳೆ 1200 ಬಿಎಂಟಿಸಿ ಬಸ್ ರಸ್ತೆಗಳಿಸಲು ತೀರ್ಮಾನಿಲಾಗಿದೆ’ ರಾಜೇಶ್ ಮಾಹಿತಿ ನೀಡಿದ್ದಾರೆ.
Key words: weekend curfew- KSRTC- BMTC- Bus -Traffic.