ಮೈಸೂರು, ಜೂನ್ 27, 2021 (www.justkannada.in): ಮಹಾರಾಜ ಇನ್ಸ್ಟಿಟ್ಯೂಟ್ ಆಫ್ ಟೆಕಾಲಜಿ ಮೈಸೂರು (ಎಂಐಟಿಎಂ) ಎಲ್ಲಾ ಐದೂ ಪದವಿ ಕೋರ್ಸ್ ಗಳಿಗೂ ಸಹ ನವದೆಹಲಿಯ ನ್ಯಾಷನಲ್ ಬೋರ್ಡ್ ಆಫ್ ಅಕ್ರೆಡಿಟೇಷನ್ (ಎನ್ಬಿಎ) ವತಿಯಿಂದ 2021-22, 2022-23 ಹಾಗೂ 2023-24ನೇ ಶೈಕ್ಷಣಿಕ ವರ್ಷಗಳಿಗೆ ಮಾನ್ಯತೆ ಗಳಿಸಿಕೊಂಡಿದೆ.
ಮಾನ್ಯತೆ ಪಡೆದುಕೊಂಡಿರುವ ಕೋರ್ಸ್ ಗಳು: ಸಿವಿಲ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಹಾಗೂ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಹಾಗೂ ಕಮ್ಯೂನಿಕೇಷನ್ ಇಂಜಿನಿಯರಿಂಗ್, ಮಾಹಿತಿ ವಿಜ್ಞಾನ ಹಾಗೂ ಇಂಜಿನಿಯರಿಂಗ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್.
ಎನ್ಬಿಎ ಒಂದು ಶಿಕ್ಷಣ ಗುಣಮಟ್ಟವನ್ನು ಖಾತ್ರಿಪಡಿಸುವ ಏಜೆನ್ಸಿಯಾಗಿದ್ದು, ಈ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿರುವ ಶಿಕ್ಷಣದ ಗುಣಮಟ್ಟ ಪರಿಣಾಮ ಆಧಾರಿತ ಶಿಕ್ಷಣ (Outcome Based Education M©E) ಸಿದ್ದಾಂತದ ಪ್ರಕಾರ ಇದೆ ಎಂದು ದೃಢಪಡಿಸಿದೆ.
ಎಂಐಟಿಎಂನ ಪ್ರಾಂಶುಪಾಲರಾದ ಡಾ. ನರೇಶ್ ಕುಮಾರ್ ಬಿ.ಜಿ, ಅಧ್ಯಕ್ಷರು, ಆಡಳಿತ ಪರಿಷತ್ ಡಾ. ಡಿ.ಎಸ್. ಗುರು, ಕಾರ್ಯದರ್ಶಿ ಡಾ. ಟಿ. ವಾಸುದೇವ್, ಎಂಇಟಿ ಹಾಗೂ ಎಂಇಟಿನ ಅಧ್ಯಕ್ಷರಾದ ಡಾ. ಎಸ್. ಮುರಳಿ ಅವರು ಈ ಗುರುತಿಗಾಗಿ ಎಲ್ಲಾ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಇತರೆ ಸಹಭಾಗಿಗಳಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
Key words: Accredited – five -degree -courses – MITM-NBA