ಮೈಸೂರು, ಜೂನ್ ೩೦, ೨೦೨೧ (www.justkannada.in): ಮೈಸೂರಿನ ಸೆಂಟ್ರಲ್ ಫುಡ್ ಟೆಕ್ನಾಲಾಜಿಕಲ್ ರೀಸರ್ಚ್ ಇನ್ಸ್ಟಿಟ್ಯೂಟ್ (ಸಿಎಫ್‌ಟಿಆರ್‌ಐ) ೧೦+೨ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿದೆ.
ಸಿಎಫ್‌ಟಿಆರ್‌ಐ, ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟಿçಯಲ್ ರೀಸರ್ಚ್ (ಸಿಎಸ್‌ಐಆರ್)ನ ಅಂಗ ಪ್ರಯೋಗಾಲಯವಾಗಿದೆ. ೩ ಬ್ಯಾಕ್‌ಲಾಗ್ ಹುದ್ದೆಗಳು, ಜ್ಯೂನಿಯರ್ ಸೆಕ್ರೆಟರಿಯೇಟ್ ಹಾಗೂ ಜ್ಯೂನಿಯರ್ ಸ್ಟೆನೊಗ್ರಾಫರ್ ಹುದ್ದೆಗಳು ಒಳಗೊಂಡಂತೆ ಒಟ್ಟು ೧೨ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವುದಾಗಿ ಸಂಸ್ಥೆ ತಿಳಿಸಿದೆ.
ಈ ನೇಮಕಾತಿಗಾಗಿ ನೋಂದಣಿ ಪ್ರಕ್ರಿಯೆ ಜುಲೈ ೧ ರಿಂದ ಆರಂಭವಾಗಲಿದೆ. ಆಸಕ್ತಿಯಿರುವ ಅಭ್ಯರ್ಥಿಗಳು ಜುಲೈ ೩೦ರೊಳಗೆ ಅರ್ಜಿ ಸಲ್ಲಿಸಬೇಕಾಗಿ ತಿಳಿಸಲಾಗಿದೆ. ಅರ್ಜಿಗಳ ಮುದ್ರಿತ ಪ್ರತಿಯನ್ನು ಆಗಸ್ಟ್ ೨೩ರೊಳಗೆ ಸಿಎಫ್‌ಟಿಆರ್‌ಐ ಕಚೇರಿಯನ್ನು ತಲುಪಬೇಕು.
ಆನ್‌ಲೈನ್ ಅರ್ಜಿ ಸಲ್ಲಿಕೆ
ಈ ಮೇಲಿನ ಹುದ್ದೆಗಳಿಗೆ ಬೇಕಾಗಿರುವ ವಿದ್ಯಾರ್ಹತೆ ೧೦+೨/ ೧೨ನೇ ತರಗತಿ/ ಪಿಯುಸಿ ಅಥವಾ ತತ್ಸಮಾನವಾದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಕಂಪ್ಯೂಟರ್ ಟೈಪಿಂಗ್‌ನಲ್ಲಿ ಉತ್ತಮ ಸ್ಪೀಡ್ ಮತ್ತು ಡಿಒಪಿಟಿ ಕಾಲಕಾಲಕ್ಕೆ ನಿಗದಿಪಡಿಸಿದಂತೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಜ್ಯೂನಿಯರ್ ಸ್ಟೆನೊಗ್ರಾಫರ್ ಹೊರತುಪಡಿಸಿದಂತೆ ಇತರೆ ಎಲ್ಲಾ ಹುದ್ದೆಗಳಿಗೆ ಗರಿಷ್ಠ ವಯಸ್ಸು ೨೮ ವರ್ಷಗಳು ಮೀರಿರಬಾರದು. ಜ್ಯೂನಿಯರ್ ಸ್ಟೆನೊಗ್ರಾಫರ್ ಹುದ್ದೆಗೆ ೨೭ ವರ್ಷ ಮೀರಿರಬಾರದು.
ಸಿಎಫ್‌ಟಿಆರ್‌ಐ ಹುದ್ದೆಗಳ ವಿವರಗಳು:
ಜ್ಯೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ (ಸಾಮಾನ್ಯ ಆಡಳಿತ): ೩ ಹುದ್ದೆಗಳು
ಜ್ಯೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ (ಹಣಕಾಸು ಹಾಗೂ ಲೆಕ್ಕಗಳು): ೩ ಹುದ್ದೆಗಳು
key words : cftri-mysuru-announces-jobs-for-10-2-pass-registration-begins-on-july-1
ENGLISH SUMMARY :
Central Food Technological Research Institute (CFTRI), Mysuru has announced jobs for 10+2 pass candidates. CFTRI is a constituent laboratory of the CSIR . It has announced 12 vacancies, including 3 backlog vacancies, in junior secretariat assistant and junior stenographer posts.