ಸರಕಾರಿ ಶಾಲಾ ಮಕ್ಕಳ ಪೋಷಕರಿಗೆ ‘ ಪರ್ಯಾಯ ಶಿಕ್ಷಣ’ ದ ಬಗ್ಗೆ ಮೈಸೂರಲ್ಲಿ ಅರಿವು ಮೂಡಿಸುವ ತರಬೇತಿ.

 

ಮೈಸೂರು, ಜು.01, 2021 : (www.justkannada.in news) : ಕೋವಿಡ್ ಕಾರಣದಿಂದ ಈಗ ಶಾಲೆಗಳ ಬದಲಿಗೆ ಪರ್ಯಾಯ ಶಿಕ್ಷಣವಾಗಿ ‘ಆನ್ ಲೈನ್ ‘ ತರಗತಿಗಳು ಮುನ್ನೆಲೆಗೆ ಬಂದಿದೆ. ಇದು ಕೆಲವೆಡೆ ಸರಕಾರಿ ಶಾಲೆಯ ಮಕ್ಕಳು ಹಾಗೂ ಪೋಷಕರಿಗೆ ಸಂಕಷ್ಠ ತಂದಿದೆ. ಇದನ್ನರಿತ ಮೈಸೂರಿನ ಸರಕಾರಿ ಶಾಲೆಯೊಂದು ವಿನೂತನ ಪ್ರಯತ್ನದ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಿದೆ.

jk

ಮೈಸೂರಿನ ಜಯನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ದಕ್ಷಿಣ ವಲಯ ವ್ಯಾಪ್ತಿಗೆ ಸೇರಿದ ಶಾಲಾ ಮಕ್ಕಳ ಪೋಷಕರಿಗೆ “ಗೂಗಲ್ ಮೀಟ್ ” ನಂಥ ಪರ್ಯಾಯ ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ತರಬೇತಿ ಕಾರ್ಯಕ್ರಮ ಇಂದು ನಡೆಸಲಾಯಿತು..

ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ಮಕ್ಕಳ ಪೋಷಕರೂ ಆಸಕ್ತಿಯಿಂದ ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕೋವಿಡ್ ನ ಈ ಸಂದರ್ಭದಲ್ಲಿ ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಲು ಉತ್ಸಾಹ ತೋರುವುದು ಕಂಡುಬರುತ್ತಿದೆ. 1 ನೇ ತರಗತಿಯಿಂದ 8 ನೇ ತರಗತಿ ತನಕ ಮಕ್ಕಳನ್ನು ದಾಖಲಿಸಲಾಗುತ್ತಿದೆ. ಕಳೆದ ಸಾಲಿನಲ್ಲಿ 1 ರಿಂದ 5 ನೇ ತರಗತಿ ತನಕ ಒಟ್ಟು 18 ಮಕ್ಕಳಿದ್ದರು. ಈ ಸಾಲಿನಲ್ಲಿ 30 ಮಕ್ಕಳು ದಾಖಲಾಗಿರುವುದು ವಿಶೇಷವಾಗಿದೆ.

ದಕ್ಷಿಣ ವಲಯ ಬಿ.ಆರ್.ಸಿ ಕೇಂದ್ರದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶ್ರೀಕಂಠಶಾಸ್ತ್ರಿ, ಅಶೋಕಪುರಂ ಕ್ಲಸ್ಟರ್ ಸಿ.ಆರ್.ಪಿ ರಾಜು, ಶಾಲಾ ಮುಖ್ಯಶಿಕ್ಷಕ ಶಿವಕುಮಾರ್, ಸಹಶಿಕ್ಷಕ ಸುಜ್ಙಾನ ಮೂರ್ತಿ ಹಾಗೂ ಪೋಷಕರು ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಈ ಪಾಕ್ಷಿಕದ ಎಲ್ಲಾ ವಿಷಯಗಳ ವರ್ಕ್ ಶೀಟ್ಗಳನ್ನು ವಿತರಿಸಲಾಯಿತು.

 

 

key words : mysore-education-department-alternatvi-education-training-class