ಬೆಂಗಳೂರು, ಜುಲೈ 1, 2021 (www.justkannada.in): ಬೆಂಗಳೂರಿನ 37 ವರ್ಷ ವಯಸ್ಸಿನ ವ್ಯಕ್ತಿಯೋರ್ವರು ಸಂಶಾಯಸ್ಪದ ಡೀಲರ್ ಒಬ್ಬರ ಮೂಲಕ ವಿಶ್ವದ ಅತ್ಯಂತ ಪ್ರಸಿದ್ಧಿ ಪಡೆದಿರುವ ಕ್ರಿಪ್ಟೊ ಕರೆನ್ಸಿ ಬಿಟ್ ಕಾಯಿನ್ ಅನ್ನು ಖರೀದಿಸುವ ಪ್ರಯತ್ನದಲ್ಲಿ ಬರೋಬ್ಬರಿ ರೂ.3.5 ಕೋಟಿ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ಜೆ.ಪಿ. ನಗರದ ನಿವಾಸಿ ಗೌತಂ ಪಿ.ಕೆ, ಎಂಬುವವರು ಈ ಮೊತ್ತವನ್ನು ಕೃಣಾಲ ಅನೂರ್ ಚಂದರನ ಎಂಬ ಕ್ರಿಪ್ಟೊಕರೆನ್ಸಿ ಡೀಲರ್ ಒಬ್ಬರಿಗೆ ನೀಡಿರುವುದಾಗಿ ತಿಳಿದು ಬಂದಿದೆ.
ಚಂದರನ ಅವರು, ಗೌತಂ ಅವರಿಗೆ ಅವರ ಓರ್ವ ಸ್ನೇಹಿತ ರಮೇಶ್ ಟಿ.ವಿ. ಅವರ ಮೂಲಕ ಪರಿಚಯವಾದರು. ರಮೇಶ್ ಎಂಬ ವ್ಯಕ್ತಿ ಕ್ರಿಪ್ಟೊಕರೆನ್ಸಿ ವಹಿವಾಟಿನ ಮೂಲಕ ಶ್ರೀಮಂತನಾಗಿರುವುದನ್ನು ಕಂಡ ಗೌತಂ ಅವರು ತಮ್ಮ ಅದೃಷ್ಟವನ್ನು ಪರಿಶೀಲಿಸಲು ಮುಂದಾದರು.
ಕ್ರಿಪ್ಟೊಕರೆನ್ಸಿಯಲ್ಲಿರುವ ಬೃಹತ್ ಲಾಭದಿಂದ ವಿಸ್ಮಿತರಾದ ಗೌತಂ ತಾವೂ ಸಹ ಹೂಡಿಕೆ ಮಾಡಲು ನಿರ್ಧರಿಸಿ, ರಮೇಶ್ ಅವರ ಸಲಹೆ ಕೋರಿದರು. ರಮೇಶ್ ಅವರು ತಮಗೆ ಕ್ರಿಪ್ಟೊಕರೆನ್ಸಿ ವಹಿವಾಟಿನ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ ಎಂದು ಹೇಳಿ ಗೌತಂ ಅವರನ್ನು ಚಂದರನ ಅವರ ನೆರವು ಪಡೆಯುವುದಾಗಿ ತಿಳಿಸಿದರು ಎನ್ನಲಾಗಿದೆ. ಜೊತೆಗೆ ರಮೇಶ್, ಚಂದರನ ಅವರ ಕುರಿತು ತುಂಬಾ ಹೊಗಳಿದ್ದಾರೆ.
ಇದರಿಂದ ಮನವೊಲಿದ ಗೌತಂ ಚಂದರನ ಅವರಿಗೆ ಹಲವು ಬ್ಯಾಂಕ್ ವಹಿವಾಟುಗಳ ಮೂಲಕ ಒಟ್ಟು ರೂ.೩.3.5 ಕೋಟಿ ವರ್ಗಾಯಿಸಿದ್ದಾರೆ. ಆದರೆ ಚಂದರನ ಇವರಿಗೆ ಕ್ರಿಪ್ಟೊಕರೆನ್ಸಿಯಾಗಲೀ, ಅಥವಾ ಹಣವನ್ನಾಗಲಿ ನೀಡಲೇ ಇಲ್ಲ. ಮೇಲಾಗಿ ರಮೇಶ್ ಹಾಗೂ ಗೌತಂ ಇಬ್ಬರನ್ನೂ ದೂರವಿಡಲು ಆರಂಭಿಸಿದ್ದಾನೆ. ಪ್ರಸ್ತುತ ತಲೆಮರಿಸಿಕೊಂಡಿದ್ದಾರೆ
ಗೌತಂ ಅವರು ಈ ಕುರಿತು ದಕ್ಷಿಣ ಸಿಇಎನ್ ಅಪರಾಧ ಪೊಲೀಸರಿಗೆ ದೂರು ನೀಡಿದ್ದು, ಚಂದರನ ಅವರ ವಿರುದ್ಧ ಕ್ರಮ ಕೈಗೊಳ್ಳಲು ಕೋರಿದ್ದಾರೆ.
ಪೊಲಿಸರು ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಐಪಿಸಿ ಕಲಂ ೪೨೦ (ವಂಚನೆ) ಪ್ರಕರಣವನ್ನು ದಾಖಲಿಸಿಕೊಂಡು, ಚಂದರನ ಅವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: buy -bitcoin – dealer – Lost- 3.5 Crore – man