ಬೆಂಗಳೂರು,ಜುಲೈ,2,2021(www.justkannada.in) : ದೇಶದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿಚಾರವಾಗಿ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ರಾಜ್ಯ ಸರ್ಕಾರಗಳನ್ನ ಹೊಣೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, ರಾಜ್ಯ ಸರ್ಕಾರಗಳ ಸೆಸ್ ಹೆಚ್ಚಳವಾಗಿದೆ. ರಾಜ್ಯಗಳು ತಮ್ಮ ತೆರಿಗೆ ಪಾಲು ಕಡಿಮೆ ಮಾಡಬಹುದು. ದರ ನಿಯಂತ್ರಣ ರಾಜ್ಯ ಸರ್ಕಾರಗಳ ಕೈಯಲ್ಲಿ ಇದೆ ಎಂದು ತಿಳಿಸಿದರು.
ಕಚ್ಚಾ ತೈಲದ ಬೆಲೆ ತೀವ್ರ ಗತಿಯಲ್ಲಿ ಏರುತ್ತಿದೆ. ಹಾಗಾಗಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಅಗತ್ಯ ವಸ್ತುಗಳ ದರ ಹೆಚ್ಚಳ ಅನಿವಾರ್ಯ. ಅಡುಗೆ ಎಣ್ಣೆ ದರ ಏರಿಕೆಗೆ ಕಾರಣ ಇದೆ. ಅಡುಗೆ ಎಣ್ಣೆಯನ್ನ ಆಮದು ಮಾಡಿಕೊಳ್ಳುತ್ತಿದ್ದೇವೆ. ಆರ್ಥಿಕ ನೆರವು ಘೋಷಿಸಿ ಬೆಲೆ ಹೆಚ್ಚಳ ಮಾಡುತ್ತಿಲ್ಲ. ಜಿಎಸ್ ಟಿ ವ್ಯಾಪ್ತಿಗೆ ತೈಲ ಇಂಧನ ದರ ತರಲು ಅಡ್ಡಿ ಇಲ್ಲ. ಜಿಎಸ್ ಟಿ ಕೌನ್ಸಿಲ್ ಒಪ್ಪಿದ್ರೆ ಇಂಧನ ದರ ಜಿಎಸ್ ಟಿ ವ್ಯಾಪ್ತಿಗೆ ತರಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
Key words: Petrol-diesel -price hike-Union Finance Minister- Nirmala Sitharaman-bangalore