ಬೆಂಗಳೂರು, ಜುಲೈ 04, 2021 (www.justkannada.in):
Only ಕನ್ನಡ OTT- ಪ್ರಯೋಗ್ ಸ್ಟುಡಿಯೋ ಕಳೆದ 4 ವರುಷಗಳಿಂದ ಕನ್ನಡದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಪ್ತ ರಂಗ ಮಂದಿರದಲ್ಲಿ ನಡೆಸುತ್ತಾ ಕಲಾವಿದರಿಗೆ ಹಾಗೂ ಕಲಾ ರಸಿಕರಿಗೆ ಕಲಾ ಸೇತುವೆಯನ್ನು ನಿರ್ಮಿಸಿದೆ.
ಕಳೆದ ಲಾಕ್ ಡೌನ್ ಇಂದ ಕಲಾವಿದರ ಸಂಕಷ್ಟಕ್ಕೆ ನೆರವಾಗಲು ಹಾಗೂ ಕನ್ನಡ ಕಸ್ತೂರಿಯ ಕಲಾ ಸಂಸ್ಕ್ರತಿಯನ್ನು ವಿಶ್ವದ ಮೂಲೆ ಮೂಲೆಗೆ ಪಸರಿಸಲು ಒಂದು ಓಟಿಟಿ ನಿರ್ಮಾಣಕ್ಕೆ ಯೋಚನೆ ಮಾಡಿ ಒಂದು ಯೋಜನೆಯನ್ನು ಪ್ರಾರಂಭಿಸಿತು.
ಅದರ ಹೆಸರು Only ಕನ್ನಡ…. ಒಂದು ವರುಷದಿಂದ ಸಾಕಷ್ಟು ಸಿದ್ದತೆ ನಡೆಸಿ..ಅದರ ಸಾಧಕ ಭಾದಕಗಳನ್ನು ಅರ್ಥ ಮಾಡಿಕೊಂಡು ಪ್ರಯೋಗ್ ಸ್ಟುಡಿಯೋ ತಂಡದವರು ಕನ್ನಡದ ಕಲಾವಿದರಿಗೆ ಕಲಾಪ್ರಪಂಚಕ್ಕೆ ಕಲಾಪ್ರದರ್ಶನಕ್ಕೆ ಓಟಿಟಿಯನ್ನು ತರುತ್ತಿದ್ದಾರೆ.
Only ಕನ್ನಡ ಓಟಿಟಿಯಲ್ಲಿ ಸಂಗೀತ ನಾಟಕ ನೃತ್ಯ ಯಕ್ಷಗಾನ ಹರಿಕಥೆ ಸಾಹಿತ್ಯ ಹಲವಾರು ವಿವಿಧ ಸಂಸ್ಕೃತಿಗಳ ಕಲೆಗಳನ್ನು ನಾಡಿನ ಜನಕ್ಕೆ ತಲುಪಿಸಲು ಮುಂದಾಗಿದ್ದಾರೆ. ಕನ್ನಡಕ್ಕಾಗಿ ಸಂಕಲ್ಪ ಪೂಜೆಯನ್ನು ಮಾಡಿ ..ಓನ್ಲಿ ಕನ್ನಡ ಶುಭ ಮುಹೂರ್ತದಲ್ಲಿ ಓಟಿಟಿಯ ಪ್ರೊಡಕ್ಷನ್ಸ್ ಕೆಲಸವನ್ನು ಪ್ರಾರಂಭ ಮಾಡುತ್ತಿದ್ದಾರೆ.