ಮೈಸೂರು, ಜುಲೈ ,5,2021 (www.justkannada.in): ಕೋವಿಡ್ ಸಾಂಕ್ರಾಮಿಕದ ಈ ಕಷ್ಟದ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾಲಯ ವಿದ್ಯಾರ್ಥಿಗಳನ್ನು ಸೃಜನಶೀಲ ಕಲಿಕೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವಂತೆ ಮಾಡಲು ಅವಕಾಶವೊಂದನ್ನು ಸೃಷ್ಟಿಸಿದೆ.
ಮೈಸೂರು ವಿಶ್ವವಿದ್ಯಾಲಯವು ‘ಮಿಷನ್ ಇನ್ನೋವೇಷನ್ ಮೈಸೂರು’ (ಎಂಐಎಂ) ಎಂಬ ಹೆಸರಿನ ವೇದಿಕೆಯನ್ನು ರಚಿಸಿದ್ದು, ವಿದ್ಯಾರ್ಥಿಗಳನ್ನು ಆಲೋಚಿಸುವುದು, ಸಮಸ್ಯೆ ಬಗೆಹರಿಸುವುದು ಹಾಗೂ ಸಮಾಜದ ಮೇಲೆ ಉತ್ತಮ ಪರಿಣಾಮವನ್ನು ಬೀರುವಂತೆ ಮಾಡುವುದು ಈ ವೇದಿಕೆಯ ಮುಖ್ಯ ಉದ್ದೇಶವಾಗಿದೆ. ಎಂಐಎಂ, ಮೈಸೂರು ವಿಶ್ವವಿದ್ಯಾಲಯದಲ್ಲಿ ಸೃಜನಶೀಲತೆ ಹಾಗೂ ನಾವೀನ್ಯತೆಯ ಸಂಪ್ರದಾಯವನ್ನು ನಿರ್ಮಿಸುವಲ್ಲಿ ಪ್ರಮುಖ ವೇದಿಕೆಯಾಗಲಿದೆ. ಎಲ್ಲವೂ ಯೋಜಿಸಿದಂತೆ ನಡೆದರೆ ಈ ಕಾರ್ಯಕ್ರಮ ಮೈಸೂರನ್ನು ಒಂದು ನಾವೀನ್ಯತೆಯ ಕೇಂದ್ರವನ್ನಾಗಿಸಲಿದೆ.
ಈ ವೇದಿಕೆಯಲ್ಲಿ ವಿದ್ಯಾರ್ಥಿಗಳು ತಮ್ಮ ಮೂಲ ಕಲ್ಪನೆಗಳನ್ನು ಸಲ್ಲಿಸಬಹುದು, ಉದ್ಯಮಿಗಳು, ಕ್ಷೇತ್ರ ತಜ್ಞರು ಹಾಗೂ ತಾಂತ್ರಿಕ ತಜ್ಞರಿಂದ ಮಾರ್ಗದರ್ಶನವನ್ನು ಪಡೆಬಹುದು. ಜೊತೆಗೆ ವಿದ್ಯಾರ್ಥಿಗಳು ತಮ್ಮದೇ ಆದ ಸ್ವಂತ ಉತ್ಪನ್ನವೊಂದನ್ನು ನಿರ್ಮಿಸಲು ಹಾಗೂ ತಮ್ಮದೇ ಸ್ವಂತವಾದ ಉದ್ದಿಮೆಯನ್ನು ಆರಂಭಿಸಲು ಅಗತ್ಯ ಬೆಂಬಲವನ್ನೂ ಪಡೆದುಕೊಳ್ಳಬಹುದು.
ಕೋವಿಡ್ ಸಾಂಕ್ರಾಮಿದಂತಹ ಕಷ್ಟದ ಸನ್ನಿವೇಶಗಳಲ್ಲಿಯೂ ಸಹ ಇಂತಹ ಆವಿಷ್ಕಾರಿ ಆಲೋಚನೆ ಹಾಗೂ ನಿರಂತರ ಪರಿಶ್ರಮದ ಮೂಲಕ ವಿದ್ಯಾರ್ಥಿಗಳನ್ನು ಕಲಿಕಾ ನಿರಂತರಾಗಿರಿಸಲು ಹಾಗೂ ಅವರಲ್ಲಿ ಕಲಿಕೆಯ ಕುತೂಹಲವನ್ನು ಮೂಡಿಸುವಲ್ಲಿ ಮೈಸೂರು ವಿಶ್ವವಿದ್ಯಾಲಯ ಕುಲಪತಿಗಳಾದ ಡಾ. ಜಿ. ಹೇಮಂತ್ ಕುಮಾರ್ ಅವರ ಸಮರ್ಥ ನಾಯಕತ್ವದಡಿ ಯಶಸ್ವಿಯಾಗಿ ಮುಂದುವರೆದಿದೆ. ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ: uomcareerhub.com/MIM
Key words: University of Mysore – Mission Innovation Mysore –MIM- Forum.