ಮೈಸೂರು,ಜುಲೈ,7,2021(www.justkannada.in): ಲಿಟರರೀ ಫೋರಂ ಚಾರಿಟಬಲ್ ಟ್ರಸ್ಟ್ ವತಿಯಿಂದ ಮೈಸೂರಿನಲ್ಲಿ ಉಚಿತ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು.
ಲಿಟರರೀ ಫೋರಂ ಚಾರಿಟಬಲ್ ಟ್ರಸ್ಟ್ ಮೈಸೂರಿನ ಕರಕುಶಲ ನಗರದ 250 ನಿವಾಸಿಗಳಿಗೆ ಉಚಿತ ಲಸಿಕೆ ಕೊಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ವೇಳೆ ಲಘು ಉಪಹಾರದ ಪ್ಯಾಕೆಟ್ ಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದ ಮೂಲಕ ರೋಗನಿರೋಧಕ ಲಸಿಕೆಯನ್ನು ಜನರಿಗೆ ತಲುಪಿಸಿ ಮೈಸೂರು ನಗರವು ಸ್ವಾಸ್ಥ್ಯ ಸ್ವಚ್ಛತೆಗಳೊಂದಿಗೆ ಸುದೃಢ ಭವಿಷ್ಯತ್ವವನ್ನು ಮುಂದುವರೆಯಲು ಕೈ ಜೋಡಿಸಿದ್ದಾರೆ.
ಮೈಸೂರಿಸ ಲಿಟರರೀ ಫೋರಂ ಚಾರಿಟಬಲ್ ಟ್ರಸ್ಟ್ ವತಿಯಿಂದ ಈಗಾಗಲೇ ಕೈಗೊಂಡಿರುವ ಸಹಾಯಾರ್ಥ ಕಾರ್ಯಕ್ರಮಗಳು ಇಂತಿವೆ.
ಐಟಿ. ಇಲಾಖೆಯಲ್ಲಿ ೩೦೦ ಮಂದಿಗೆ ಸ್ಯಾನಿಟೈಸಿಂಗ್ ಕಿಟ್ ಗಳನ್ನು ಒದಗಿಸಲಾಯಿತು. ಪ್ರತಿ ಕಿಟ್ ನಲ್ಲಿ ಒಂದು ಸ್ಯಾನಿಟೈಸರ್, ದ್ರವಸಾಬೂನು, ಸ್ವಚ್ಛತೆಗಾಗಿ ತೇವಟಿಶ್ಯೂಗಳು ಮತ್ತು ಧೂಮಕ್ರಿಮಿನಿರೋಧಕಗಳೆಲ್ಲವೂ ಒಳಗೊಂಡಿದ್ದವು. 150 ಅತಿಥಿ ಅಧ್ಯಾಪಕರುಗಳಿಗೆ ಆಹಾರ ಪದಾರ್ಥಗಳ ಕಿಟ್ ಗಳನ್ನು ವಿತರಿಸಲಾಗಿದೆ. ತುಳಸೀದಾಸ್ ಆಸ್ಪತ್ರೆ, ಮೈಸೂರು, ಇಲ್ಲಿಗೆ ರೋಗಿಗಳ ಹಾಸಿಗೆಯ ಪಕ್ಕದಲ್ಲಿ ಇರಿಸುವ ಕಪಾಟುಗಳನ್ನು ಒದಗಿಸಲಾಗಿದೆ.
ಮೈಸೂರಿನ ಜಿಲ್ಲಾ ಸರಕಾರೀ ಆಸ್ಪತ್ರೆಗೆ ರೆಫ್ರಿಜರೇಟರುಗಳು, ಮರುಉಪಯೋಗಿ ಇನ್ಫ್ಯೂಸರುಗಳು, ಬಗ್ ಜಾಪರುಗಳು ( Bug Zapper) ಶಸ್ತ್ರಚಿಕಿತ್ಸಾ ಕೊಠಡಿಯ ಸಲಕರಣೆಗಳು ಮತ್ತು ಗೋಡೆ ಗಡಿಯಾರಗಳನ್ನು ಸರಬರಾಜು ಮಾಡಲಾಗಿದೆ. ಹೊರರೋಗಿಗಳಿಗೆ ಔಷಧಿಗಳನ್ನು ಪೂರೈಸಲಾಗಿದೆ. ಒಟ್ಟು 355 ಪೌರಕಾರ್ಮಿಕರುಗಳಿಗೆ ಬೆಳಗಿನ ಉಪಹಾರವನ್ನು ಒದಗಿಸಲಾಗಿದೆ.
Key words: Free -Covid Vaccine- Issued – Literary Forum Charitable Trust-mysore