ಬೆಂಗಳೂರು, ಜುಲೈ 8, 2021 (www.justkannada.in): ಕೇಂದ್ರ ಸರ್ಕಾರ ತನ್ನ ಎರಡನೆ ಅವಧಿಯಲ್ಲಿ ನಿನ್ನೆಯಷ್ಟೇ ಕ್ಯಾಬಿನೆಟ್ ಪುನಾರಚನೆಯನ್ನು ಮಾಡಿದೆ. ಈ ಬಾರಿ ಕಲ್ಯಾಣ ಕರ್ನಾಟಕ (ಈ ಹಿಂದೆ ಹೈದ್ರಬಾದ್ ಕರ್ನಾಟಕ ಎಂದು ಕರೆಯಲಾಗುತಿತ್ತು) ಭಾಗದ ಎಂಪಿ ಭಗವಂತ್ ಖೂಬಾ ಅವರು ಮೋದಿಯವರ ಕ್ಯಾಬಿನೆಟ್ ನಲ್ಲಿ ಸಚಿವ ಸ್ಥಾನವನ್ನು ಗಿಟ್ಟಿಸಿಕೊಂಡರು. ಆದರೆ ನಮ್ಮ ರಾಜ್ಯದ ಅನೇಕರಿಗೆ ಈ ಭಗವಂತ್ ಖೂಬಾ ಎಂದರೆ ಯಾರು ಎಂದೇ ಗೊತ್ತಿಲ್ಲ. 54-ವರ್ಷ ವಯಸ್ಸಿನ ಭಗವಂತ್ ಖೂಬಾ ಅವರಿಗೆ ನೂತನ ಹಾಗೂ ನವೀಕೃತ ಇಂಧನ ಹಾಗೂ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ರಾಜ್ಯ ಖಾತೆಯ ಜವಾಬ್ದಾರಿಯನ್ನು ನೀಡಲಾಗಿದೆ.
ಈ ಹಿಂದೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಪ್ರದೇಶದಲ್ಲಿ, ನಿಧಾನವಾಗಿ ತಮ್ಮ ಪ್ರಭಾವ ಬೀರಿ ಕ್ರಮೇಣ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವ ಮೂಲಕ ಭಗವಂತ್ ಖೂಬಾ ಅವರ ರಾಜಕೀಯ ಏಳಿಗೆ ಆರಂಭವಾಯಿತು. ಇದಾದ ನಂತರ 2014ರ ಲೋಕಸಭಾ ಚುನಾವಣೆಯಲ್ಲಿ ಇವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿ ಟಿಕೆಟ್ ನೀಡಲಾಯಿತು.
ಕರ್ನಾಟಕದ ಹಿಂದಿನ ಮುಖ್ಯಮಂತ್ರಿ ಎನ್. ಧರಂ ಸಿಂಗ್ ಅವರ ಸೀಟನ್ನು, ಮೊದಲ ಬಾರಿಗೆ ಸ್ಪರ್ಧಿಸಿದ ಖೂಬಾ ಅವರು ವಶಪಡಿಸಿಕೊಂಡರು. ದೇಶವ್ಯಾಪಿ ಬಿಜೆಪಿ ಪರ ಎದ್ದ ಅಲೆಯೊಂದಿಗೆ ಇವರ ವಿಜಯ ಬಹಳ ಹೆಸರು ಮಾಡಿತು. ಏಕೆಂದರೆ, ಆ ಚುನಾವಣೆಯಲ್ಲಿ ಇವರು ೯೨,೨೨೨ ಮತಗಳ ಭರ್ಜರಿ ಜಯವನ್ನು ಸಾಧಿಸಿದರು. 2019ರಲ್ಲಿ ಖೂಬಾ ಅವರು ಪುನಃ ಕಾಂಗ್ರೆಸ್ ಸಚಿವ, ಅಂದಿನ ಪಕ್ಷದ ಕಾರ್ಯನಿರತ ಅಧ್ಯಕ್ಷ ಈಶ್ವರ್ ಖಂಡ್ರೆ ಅವರ ಎದುರಿಗೆ ಸ್ಪರ್ಧಿಸಿ ೧,೧೬,೮೩೪ ಮತಗಳ ಭಾರಿ ಅಂತರದಿಂದ ಗೆಲ್ಲುವ ಮೂಲಕ ಆ ಭಾಗದಲ್ಲಿ ದೊಡ್ಡ ಸದ್ದು ಮಾಡಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೇಸರಿ ಪಡೆಯ ನಿಷ್ಠಾವಂತ ಕಾರ್ಯಕರ್ತನಾಗಿರುವ ಖೂಬಾ ಅವರು ಬೀದರ್‌ನ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಕ್ಕೆ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಶರಣು ಸಲಗಾರ್ ಅವರಿಗೆ ಬಿಜೆಪಿ ಪಕ್ಷದಿಂದ ಟಿಕೆಟ್ ಕೊಡಿಸುವಲ್ಲಿ ಮುಖ್ಯ ಪಾತ್ರವಹಿಸಿದರು. ಆದರೆ ಇದಕ್ಕೆ ಸ್ಥಳೀಯವಾಗಿ ಪಕ್ಷದಲ್ಲಿ ಭಿನ್ನಾಭಿಪ್ರಾಯ ಮೂಡಿತು. ಆದರೂ ಸಹ ಸಲಗಾರ್ ಅವರು ಸ್ಪರ್ಧಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಈ ಮೂಲಕ ಖೂಬಾ ಅವರು ತಮ್ಮ ಟೀಕಾಕಾರನ್ನು ಸುಮ್ಮನಾಗಿಸಿ, ಜನರ ಬೆಂಬಲ ಮುಂದುವರೆಯುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು.
ಭಗವಂತ್ ಖೂಬಾ ತುಮಕೂರಿನ ಶ್ರೀ ಸಿದ್ದಗಂಗಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮೆಕ್ಯಾನಿಕಲ್ ಇಂಜಿನಿಯರಿAಗ್ ಪದವಿಯನ್ನು ಪಡೆದುಕೊಂಡಿದ್ದಾರೆ. ಕುಟುಂಬದ, ರಸ್ತೆ ಹಾಗೂ ರೈಲು ಕಾಮಗಾರಿಗಳ ಗುತ್ತಿಗೆ ವ್ಯಾಪಾರವನ್ನು ಸ್ವಲ್ಪ ಕಾಲದವರೆಗೆ ಮುಂದುವರೆಸಿಕೊಂಡು ಬಂದ ಖೂಬಾ ಅವರು ಮುಖ್ಯವಾಹಿನಿ ರಾಜಕೀಯಕ್ಕೆ ಧುಮುಕುವ ಮುಂಚೆ ಕೃಷಿ ಅನುಭವವನ್ನೂ ಹೊಂದಿದ್ದಾರೆ. ಖೂಬಾ ಅವರು ರಾಜ್ಯದ ಪ್ರಬಲ ಲಿಂಗಾಯತ ಸಮುದಾಯದ ಬಣಜಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
2019ರಲ್ಲಿ 17ನೇ ಲೋಕಸಭೆಗೆ ಪುನರಾಯ್ಕೆಯಾದ ನಂತರ ಖೂಬಾ ಅವರು ಕೃಷಿ ಸ್ಥಾಯಿ ಸಮಿತಿಯ ಸದಸ್ಯರಾಗಿ ಮತ್ತು ರೈಲ್ವೆ ಮಂತ್ರಾಲಯದ ಸಮಾಲೋಚಕ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.
ಸುದ್ದಿ ಮೂಲ: ಇಂಡಿಯನ್ ಎಕ್ಸ್ಪ್ರೆಸ್
Key words: MP – Bhagwant Khooba-ministerial- position–PM Modi- cabinet