ಮೈಸೂರು,ಜುಲೈ,14,2021(www.justkannada.in): ಅನುಮತಿ ಇಲ್ಲದೇ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿದ್ದಾರೆ. ಲೈಸೆನ್ಸ್ ಅವಧಿ ಮುಗಿದರೂ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿದ್ದಾರೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಆರೋಪ ಮಾಡಿದ್ದಾರೆ.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ಸರ್ಕಾರಕ್ಕೆ ಬರಬೇಕಿದ್ದ ರಾಜಧನ ಸರಿಯಾಗಿ ಬರ್ತಿಲ್ಲ. ಅಕ್ರಮ ಗಣಿಗಾರಿಕೆಯಿಂದ ಕೆಆರ್ ಎಸ್ ಡ್ಯಾಂನಲ್ಲಿ ಬಿರುಕು ಬಗ್ಗೆ ದಿಶಾ ಸಭೆಯಲ್ಲಿ ಪ್ರಶ್ನಿಸಿದ್ದೆ. ಕೆಆರ್ ಎಸ್ ಡ್ಯಾಂನಲ್ಲಿ ಬಿರುಕು ಬಿಟ್ಟಿದೆಯಾ ಎಂದು ಪ್ರಶ್ನಿಸಿದ್ಧೆ. ಇದನ್ನ ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ಅಕ್ರಮ ಗಣಿಗಾರಿಕೆಯಿಂದ ಕೆಆರ್ ಎಸ್ ಡ್ಯಾಂನಲ್ಲಿ ಬಿರುಕು ಸಂಬಂಧ ರೈತರು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದರು. ಸ್ಪೋಟಕ ಬಳಕೆಯಿಂದ ಬಿರುಕು ಎಂದು ಆತಂಕ ವ್ಯಕ್ತಪಡಿಸಿದ್ದು ತಪ್ಪಾ..? ಇಲ್ಲ ಸುಮ್ಮನಿರಬೇಕಿತ್ತಾ..? ನಾನು ಎಲ್ಲೂ ಸಹ ಕೆಆರ್ ಎಸ್ ಬಿರುಕು ಬಿಟ್ಟಿದೆ ಎಂದು ಹೇಳಿಲ್ಲ. ಸಂಸದೆಯಾಗಿ ದಿಶಾಸಭೆಯಲ್ಲಿ ಪ್ರಶ್ನಿಸಿದ್ದೆ ಎಂದು ಸುಮಲತಾ ಅಂಬರೀಶ್ ಸ್ಪಷ್ಟನೆ ನೀಡಿದರು.
ENGLISH SUMMARY….
MP Sumalatha Ambareesh alleges illegal mining activities
Mysuru, July 14, 2021 (www.justkannada.in): Mandya MP Sumalatha Ambareesh has alleged illegal mining activities in the Mandya district. “Mining activities are being undertaken even though the date of license has expired.”
Speaking to the media persons in Mysuru today, she informed the government is not receiving the royalty properly. “In the DISHA meeting had questioned about the crack in KRS dam due to the illegal mining activities. I had questioned whether the dam has developed cracks. But it was used politically,” she explained.
“Local farmers had expressed their anguish about the possibility of a crack in the KRS dam structure due to the illegal mining activities. Is it wrong to express my concern about the possibility of the development of cracks in the structure due to the usage of explosives in illegal mining activities?! Should I have remained quiet?! I have not told anywhere that the dam has developed cracks. I had just raised the question in the DISHA meeting as an MP,” she clarified.
Keywords: Mandya MP Sumalatha Ambareesh/ KRS dam/ crack/ DISHA meeting/ illegal mining activities
Key words: Illegal mining -without -permission – alleges -MP Sumalatha Ambarish