ಮೈಸೂರು,ಜುಲೈ,15,2021(www.justkannada.in): ಕೇರಳಾ ವೈನಾಡು ಭಾಗದಲ್ಲಿ ವ್ಯಾಪಕ ಮಳೆ ಹಿನ್ನೆಲೆ, ಕಬಿನಿಗೆ ಒಳಹರಿವಿನಲ್ಲಿ ದಿಢೀರ್ ಏರಿಕೆಯಾಗಿದೆ.
ಕಬಿನಿಗೆ 14500 ಕ್ಯೂಸೆಕ್ ಗೆ ಒಳಹರಿವು ಏರಿಕೆಯಾಗಿದ್ದು, ಇಂದು 10 ಒಳಗೆ ಹೊರಹರಿವು ಹೆಚ್ಚಳವಾಗುವ ಸಾಧ್ಯತೆ ಇದೆ. ಸದ್ಯ 1700 ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗುತ್ತಿದ್ದು, 5000 ಕ್ಯೂಸೆಕ್ ಗೆ ಹೆಚ್ವಳ ವಾಗಿದೆ.
ಪ್ರಸ್ತುತ ನೀರಿನ ಮಟ್ಟ2379.05 ಕ್ಕೆ ಏರಿಕೆಯಾಗಿದೆ. ಇಂದು ಸಂಜೆ ವೇಳೆಗೆ 18 ರಿಂದ 20 ಸಾವಿರ ಕ್ಯೂಸೆಕ್ ನೀರು ಹರಿದುಬರುವ ಸಾಧ್ಯತೆ ಇದ್ದು, ಒಳಹರಿವು ಹೆಚ್ಚಿದಂತೆಲ್ಲ ಹೊರಹರಿವು ಹೆಚ್ವಳವಾಗುವ ಸಾಧ್ಯತೆ ಇದೆ. ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
Key words: rain -rise – Kabini -influx.