ಬೆಂಗಳೂರು:ಜುಲೈ-16:(www.justkannada.in) ಇತ್ತೀಚೆಗೆ ಪ್ಲಾಸ್ಟಿಕ್ ಬಳಕೆ ನಿಷೇಧ ಹಿನಲೆಯಲ್ಲಿ ಇಲ್ಲೊಂದು ಮಹಿಳೆಯರಗೊಂಪು ಪ್ಲಾಸ್ಟಿಕ್ ಗೆ ಪರ್ಯಾಯ ಮಾರ್ಗವೊಂದನ್ನು ಆರಂಭಿಸಿದ್ದು, ಪರಿಸರ ಕಾಳಜಿಯನ್ನೂ ಮೆರೆಯುತ್ತಿದ್ದಾರೆ.
ಹೌದು. ಬೆಂಗಳೂರಿನ ಮಲ್ಲೇಶ್ವರಂ ನ 20 ಮಹಿಳೆಯರ ಗುಂಪು ಹಳೆಯ ಕರ್ಟನ್ಸ್, ಬ್ಲೌಸ್ ಪೀಸ್, ಬೆಡ್ ಶೀಟ್ ಮೊದಲಾದ ಹಳೆಯ ಬಟ್ಟೆಗಳನ್ನು ಸಂಗ್ರಹಿಸಿ, ಅವುಗಳಿಂದ ಬಟ್ಟೆಯ ಬ್ಯಾಗ್ ಗಳನ್ನು ತಯಾರಿಸಿದ್ದಾರೆ. ಈ ಮೂಲಕ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಜತೆಗೆ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ’ಬ್ಯಾಗ್ಸ್ ಇನ್, ಪ್ಲಾಸ್ಟಿಕ್ ಔಟ್’ ಎಂಬ ಉಪಕ್ರಮದೊಂದಿಗೆ ಮಲ್ಲೇಶ್ವರಂನ ನೆರೆಹೊರೆಯ 20 ಮಹಿಳೆಯರ ಗುಂಪು ಈ ಅಭಿಯಾನವನ್ನು ಆರಂಭಿಸಿತು. ಸುಮಾರು 600 ಬಟ್ಟೆ ಚೀಲಗಳನ್ನು ತಯಾರಿಸಿ, ಬಟ್ಟೆ ಚೀಲಗಳ ಬಳಕೆಯನ್ನು ಉತ್ತೇಜಿಸಲು ಅವುಗಳನ್ನು ಮಾರಾಟಗಾರರು, ಅಂಗಡಿಯವರು ಮತ್ತು ಸುತ್ತಮುತ್ತಲ ನಿವಾಸಿಗಳಿಗೆ ನೀಡಿದರು. ಈ ಮೂಲಕ ಮಲ್ಲೇಶ್ವರಂ ಸುತ್ತಮುತ್ತ ಬಟ್ಟೆ ಬ್ಯಾಗ್ ಗಳ ಬಳಕೆ ಹೆಚ್ಚಾಗುವಂತಾಯಿತು.
ಈ ಕುರಿತು, ಈ ಗುಂಪಿನ ಸದಸ್ಯೆಯಾದ ಉಪಾಸನಾ ನಾರಂಗ್ ಹೇಳುವ ಪ್ರಕಾರ, ಮನೆಯಲ್ಲಿರುವ ಹಳೆಯ ಬಟ್ಟೆ, ಕರ್ಟನ್, ಬೆಡ್ ಶೀಟ್ ಗಳನ್ನು ಯಾರಾದರೂ ದಾನವಾಗಿ ನೀಡಿದರೆ ಅದನ್ನು ನಾವು ಪ್ರೋತ್ಸಾಹಿಸಿ, ಅಂತಹ ಬಟ್ಟೆಗಳನ್ನು ತೆಗೆದುಕೊಂಡು ಈ ಪ್ಲಾಸ್ಟಿಕ್ ಪರ್ಯಾಯ ಬ್ಯಾಗ್ ಗಳನ್ನು ಮಾಡಿ ನೀಡುತ್ತೇವೆ. ನಮ್ಮ ಈ ಪ್ರಯತ್ನವನ್ನು ಕಂಡ ದಾನಿಯೊಬ್ಬರು ಒಂದು ಹೊಲಿಗೆ ಯಂತ್ರವನ್ನು ನೀಡಿದ್ದು, ಈಗಾಗಲೇ ಈ ಯಂತ್ರದ ಮೂಲಕ ಹಲವಾರು ಬ್ಯಾಗ್ ಗಳನ್ನು ತಯಾರಿಸಿ ಮಾರಾಟಮಾಡುತ್ತಿದ್ದೇವೆ. ಸುತ್ತಮುತ್ತಲ ಜನರು ಕೂಡ ಈ ಕಾರ್ಯವನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಅಲ್ಲದೇ ನಮ್ಮ ಗುಂಪು ಜೂನ್22 ರಂದು ಮಲ್ಲೇಶ್ವರಂನ ಸರ್ಕಾರಿ ಗರ್ಲ್ಸ್ ಹೈಸ್ಕೂಲ್ ಗೆ 350 ಬಟ್ಟೆ ಬ್ಯಾಗ್ ಗಳನ್ನು ತಯಾರಿಸಿ ಕೊಟ್ಟಿದ್ದೇವೆ. ಅಲ್ಲದೇ ದಿನಬಳಕೆಯಲ್ಲಿ ಹೇಗೆ ಪ್ಲಾಸ್ಟಿಕ್ ಪರ್ಯಾಯವಾಗಿ ಬಟ್ಟೆ ಬ್ಯಾಗ್ ಗಳನ್ನು ಬಳಸಬಹುದು ಎಂಬ ಬಗ್ಗೆ ಅರಿವು ಮೂಡಿಸಿರುವುದಾಗಿ ಹಾಗೂ ಇನ್ನಷ್ಟು ಬ್ಯಾಗ್ ಗಳನ್ನು ತಯಾರಿಸಲು ನಮ್ಮ ಗುಂಪು ಸಿದ್ಧತೆ ನಡೆಸುತ್ತಿರುವುದಾಗಿ ಉಪಾಸನಾ ತಿಳಿಸಿದ್ದಾರೆ.
ಪ್ಲಾಸ್ಟಿಕ್ ಪರ್ಯಾಯ ಮಾರ್ಗವಾಗಿ ಬಟ್ಟೆ ಬ್ಯಾಗ್ ಗಳ ಜತೆಗೆ ನ್ಯೂಸ್ ಪೇಪರ್ ಬ್ಯಾಗ್, ಕವರ್ ಗಳನ್ನು ಕೂಡ ಈ ಮಹಿಳಾ ಗುಂಪು ತಯಾರಿಸುತ್ತಿದ್ದು, ಪರಿಸರ ಸ್ನೇಹಿಯಾದ ಮಹಿಳೆಯರ ಈ ಕಾರ್ಯ ನಿಜಕ್ಕೂ ಎಲ್ಲರಿಗೂ ಮಾದರಿಯಾಗಿದೆ.
ಹಳೆ ಕರ್ಟನ್, ಬೆಡ್ ಶೀಟ್ ಗಳಿಂದ ತಯಾರಾಗಿವೆ ಬ್ಯಾಗ್, ಕೈ ಚೀಲ: ಮಹಿಳೆಯರ ಪರಿಸರ ಕಾಳಜಿಗೆ ಸರ್ವಜನಿಕರ ಮೆಚ್ಚುಗೆ
Curtains, bed sheets are saving the environment
Old curtains, blouse pieces and bed sheets don’t go waste in Malleswaram. A group of about 20 women from this neighbourhood have started an initiative to collect old clothes and turn them into cloth bags. With the cloth bags, these women are trying to completely eradicate the use of plastic bags in Malleshwaram.