ನವದೆಹಲಿ,ಜುಲೈ,17,2021(www.justkannada.in): ನೂತನ ಶೈಕ್ಷಣಿಕ ವರ್ಷದಿಂದ 8 ರಾಜ್ಯಗಳ 14 ಇಂಜನಿಯರಿಂಗ್ ಕಾಲೇಜುಗಳ ಆಯ್ದ ಶಾಖೆಗಳಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಕೋರ್ಸುಗಳನ್ನು ನಡೆಸುವ ನಿರ್ಧಾರವನ್ನು ಉಪರಾಷ್ಟ್ರಪತಿ ಎಂ ವೆಂಕಯ್ಯನಾಯ್ಡು ಅವರು ಸ್ವಾಗತಿಸಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯನುಸಾರ ಎ.ಐ.ಸಿ.ಟಿ.ಇ ಬಿ ಟೆಕ್ ಪ್ರೋಗ್ರಾಂ ಗಳನ್ನು ಪ್ರಾದೇಶಿಕ ಭಾಷೆಗಳಾದ ಕನ್ನಡ, ಹಿಂದಿ, ಮರಾಠಿ, ತಮಿಳು, ತೆಲುಗು, ಗುಜರಾತಿ, ಮಲಯಾಳಂ, ಬೆಂಗಾಲಿ, ಅಸ್ಸಾಮಿ, ಪಂಜಾಬಿ ಹಾಗು ಒಡಿಯಾಗಳಲ್ಲಿ ಶಿಕ್ಷಣ ನೀಡಲು ಒಪ್ಪಿಗೆ ಸೂಚಿಸಿರುವುದರಿಂದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಇಂಜನಿಯರಿಂಗ್ ಕಾಲೇಜುಗಳು ಹಾಗು ಇತರ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಪ್ರಾದೇಶಿಕ ಭಾಷೆಯಲ್ಲಿ ಕೋರ್ಸ್‌ಗಳನ್ನು ನಡೆಸಲು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಆಶಯ ವ್ಯಕ್ತಪಡಿಸಿದ್ದಾರೆ.
Key words: Vice President –Venkayanayudu- welcomes -decision – regional language -courses -engineering colleges.