ಜಿಲ್ಲಾ ಆರೋಗ್ಯ ಅಧಿಕಾರಿಗೆ ಸ್ಕೌಂಡ್ರಲ್ ಎಂದ ಜರಿದ ಸ್ಪೀಕರ್ ರಮೇಶ್ ಕುಮಾರ್

ಕೋಲಾರ , ಜು.16, 2019 : (www.justkannada.in news): ಜಿಲ್ಲೆಯ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ಬೇಟಿ ನೀಡಿದ್ದ ವೇಳೆ ಚುಚ್ಚುಮದ್ದು ಕೊರತೆ ಬಗ್ಗೆ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಕೆಂಡಾಮಂಡಲರಾದ ಸ್ಪೀಕರ್ ರಮೇಶ್ ಕುಮಾರ್, ಸ್ಥಳದಲ್ಲಿದ್ದ ಜಿಲ್ಲಾ ಆರೋಗ್ಯ ಅಧಿಕಾರಿಗೆ ತೀವ್ರ ತರಾಟೆ ತೆಗೆದುಕೊಂಡರು. ಮಾತಿನ ಭರದಲ್ಲಿ ವೈದ್ಯಾಧಿಕಾರಿಯನ್ನು ಸ್ಕೌಂಡ್ರಲ್ ಎಂದು ಜರಿದರು.

ಸರಕಾರದ ಅನಿಶ್ಚತೆಯ ನಡುವೆಯೇ ಸ್ಪೀಕರ್ ರಮೇಶ್ ಕುಮಾರ್ ಮಂಗಳವಾರ ದಿಢೀರನೆ ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಗೆ ಬೇಟಿ ನೀಡಿದ್ದರು. ಈ ವೇಳೆ ಈ ಘಟನೆ ನಡೆದಿದೆ.
ದೇವರು ಅಂತ ಇದ್ರೆ ನಿಮಗೆ ಈಗಲೇ ಏನಾದ್ರೂ ಆಗ್ಬೇಕು, ಬಡವರು ಅಂದ್ರೆ ಲೆಕ್ಕಕ್ಕೆ ಇಲ್ಲ ನಿಮಗೆ ಎಂದು ತರಾಟೆ ತೆಗೆದುಕೊಂಡ ರಮೇಶ್ ಕುಮಾರ್, ನೀವೆಲ್ಲಾ ಸೇರಿ ಖಾಸಗಿ ಆಸ್ಪತ್ರೆಗೆ ಲಾಭ ಮಾಡುತ್ತೀದ್ದೀರಿ ಎಂದು ಹರಿಹಾಯ್ದರು.
ಸ್ಪೀಕರ್ ಕೋಪಕ್ಕೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ವಿಜಯ್ ಕುಮಾರ್ ಕಕ್ಕಾಬಿಕ್ಕಿಯಾಗಿ ಮರುಮಾತನಾಡದೆ ಮೌನಕ್ಕೆ ಶರಣಾದರು.

ಸ್ಪಷ್ಟನೆ :

ಇದೇ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್ . ನಾನು ಯಾರಿಗೂ ಸವಾಲು ಹಾಕಿಲ್ಲ. ಸುಪ್ರೀಂ ಕೋರ್ಟ್ ಗಿಂತ‌ ನಾನು ದೊಡ್ಡವನಲ್ಲ. ನಾಳಿನ ತೀರ್ಪಿನ ಬಳಿಕ‌ ಪ್ರತಿಕ್ರಿಯೆ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದರು.

—-

key words : karnataka-kolara-speaker-ramrshkumar-governament-hospital