ಮೈಸೂರು,ಜುಲೈ,21,2021(www.justkannada.in): ಮುಂಬರುವ ಕೋವಿಡ್ ನ ಮೂರನೇ ಅಲೆಯಲ್ಲಿ ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯಕರ್ತರು ಸೈನಿಕರ ರೀತಿ ಕೆಲಸ ಮಾಡಬೇಕು ಎಂದು ಹಿಂದುಳಿದ ವರ್ಗಗಳ ಮೋರ್ಚಾ ನಗರ ಅಧ್ಯಕ್ಷ ಜೋಗಿಮಂಜು ಕರೆ ನೀಡಿದರು.
ಮೈಸೂರು ನಗರದ ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯಕಾರಿಣಿ ಸಭೆ ನಗರದ ಸಚ್ಚಿನ್ ರಾಜೇಂದ್ರ ಭವನದಲ್ಲಿ ನಡೆಯಿತು.
ಕೋವಿಡ್ ನ ಲಾಕ್ ಡೌನ್ ನ ನಂತರ ನಡೆದ ಸಭೆಯಲ್ಲಿ ಭಾರತ ಮಾತೆ, ಶ್ಯಾಂ ಪ್ರಸಾದ್ ಮುಖರ್ಜಿ, ಪಂಡಿತ್ ದೀನ ದಯಾಳ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಗರ ಅಧ್ಯಕ್ಷರಾದ ಟಿ.ಎಸ್.ಶ್ರೀ ವತ್ಸ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಟಿ.ಎಸ್.ಶ್ರೀವತ್ಸ, ಕೋವಿಡ್ -19 ನ ಸಂಧರ್ಭದಲ್ಲಿ ಸಾರ್ವಜನಿಕರಿಗೆ ಭಾ.ಜ.ಪ.ಕಾರ್ಯಕರ್ತರು ನಾನಾ ಸಂಧರ್ಭದಲ್ಲಿ ಸಹಾಯ ಹಸ್ತ ಮಾಡಿದ್ದು ನಿಜಕ್ಕೂ ಶ್ಲಾಘನೀಯ, ಹಿಂದುಳಿದ ವರ್ಗದವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡುವ ಸವಲತ್ತುಗಳನ್ನು ನೇರ ಜನಸಾಮಾನ್ಯರಿಗೆ ತಲುಪಿಸಬೇಕಾದು ಕಾರ್ಯಕರ್ತರ ಕರ್ತವ್ಯ. ಅಸಂಘಟಿತ ವಲಯದಲ್ಲಿ ಇರುವ ಜನ ಸಾಮಾನ್ಯರು ನೋಂದಣಿ ಮಾಡಿಸಬೇಕು ಹಾಗೂ ಸಾಮನ್ಯ ಜನರಿಗೆ ಲಸಿಕೆ ಹಾಕಿಸುವ ಮೂಲಕ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ನಗರ ಓ.ಬಿ.ಸಿ.ಅಧ್ಯಕ್ಷರಾದ ಜೋಗಿಮಂಜು ಮಾತನಾಡಿ, ನರೇಂದ್ರ ಮೋದಿಯವರ ಕೇಂದ್ರ ಸರ್ಕಾರದ ಆಡಳಿತದಲ್ಲಿ , ಹಿಂದುಳಿದ ವರ್ಗದ 27 ಜನ ಮಂತ್ರಿಯಾಗಿರುವುದು ಇಬ್ಬರು ರಾಜ್ಯಪಾಲರು ಆಗಿರುವುದನ್ನು ವಿರೋಧಪಕ್ಷ ಕಾಂಗ್ರೆಸ್ ಸಹಿಸಿ ಕೊಳ್ಳಲು ಆಗುತ್ತಿಲ್ಲ, ಕಾಂಗ್ರೆಸ್ ಪಕ್ಷ ಹಿಂದುಳಿದ ವರ್ಗಗಳ ವಿರೋಧಿ ಎಂದು ಟೀಕಿಸಿದರು.
ಇಂದಿನ ರಾಜಕೀಯ ವ್ಯವಸ್ಥೆ ಯಲ್ಲಿ ಕರ್ನಾಟಕ ರಾಜ್ಯದ ೫೨% ಇರುವ ಹಿಂದುಳಿದ ವರ್ಗದ ಜನ ಸಾಮಾನ್ಯರು ಬಿಜೆಪಿ ಪರ ಇರುವುದು ಸಂತೋಷದ ವಿಚಾರ, ವಿಜ್ಞಾನಿಗಳು ತಿಳಿಸಿದ ಹಾಗೆ ಹಿಂದುಳಿದ ವರ್ಗದ ಕಾರ್ಯಕರ್ತರು ಮುಂಬರುವ ಕೋವಿಡ್ ನ ಮೂರನೇ ಅಲೆಯಲ್ಲಿ ದೇಶದ ಗಡಿಕಾಯುವ ಸೈನಿಕ ರೀತಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಗಿರೀಧರ್, ರಾಜ್ಯ ಬಿಜೆಪಿ ಓ.ಬಿ.ಸಿ.ಮೋರ್ಚಾದ ಕಾರ್ಯದರ್ಶಿ ಕೊಟ್ರೇಶ್, ಪ್ರಧಾನ ಕಾರ್ಯದರ್ಶಿ ಗೋಪಾಲ್, ಮಣಿರತ್ನಂ ನಗರ ಉಸ್ತುವಾರಿ ಹರ್ಷ, ಉಪಾಧ್ಯಕ್ಷರು, ಕಾರ್ಯದರ್ಶಿ ಗಳು ಮಂಡಲ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಇನ್ನಿತರೆ ನಾಯಕರು ಉಪಸ್ಥಿತರಿದ್ದರು.
Key words: covid-3rd wave– backward classes –BJP-Morcha -mysore