ರಾಜೀನಾಮೆ ಬಗ್ಗೆ ಸಿಎಂ ಬಿಎಸ್ ವೈ ಸುಳಿವು ಬಗ್ಗೆ ಸಚಿವ ಸಿ.ಪಿಯೋಗೇಶ್ವರ್ ಪ್ರತಿಕ್ರಿಯಿಸಿದ್ದು ಹೀಗೆ.

ಚಿಕ್ಕಬಳ್ಳಾಪುರ,ಜುಲೈ,23,2021(www.justkannada.in):  ರಾಜೀನಾಮೆ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಸುಳಿವು ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ಯಾವುದು ಯಾರಿಗೂ ಶಾಶ್ವತವಲ್ಲ. ನಾವೇನು ಶಾಶ್ವತವಾಗಿ ಮಂತ್ರಿಯಾಗಿರುವುದಿಲ್ಲ ಎಂದು ಹೇಳಿದ್ದಾರೆ.jk

ಚಿಕ್ಕಬಳ್ಳಾಪುರದ ನಂದಿ ಗಿರಿದಾಮದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸಿ.ಪಿ ಯೋಗೇಶ್ವರ್, ಸ್ವತಃ ಸಿಎಂ ಬಿಎಸ್ ವೈ ಮಾಧ್ಯಮದ ಮೂಲಕ ನಿಲುವು ತಿಳಿಸಿದ್ದಾರೆ. ಹೈಕಮಾಂಡ್ ಎಲ್ಲವನ್ನೂ ತೀರ್ಮಾನಿಸಲಿದೆ. ನಾನು ನನ್ನ ಸಮಸ್ಯೆ, ನೋವು ಹೇಳಿಕೊಂಡಿದ್ದೆ ಅಷ್ಟೆ ಎಂದರು.

ಇದೇ ವೇಳೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧವೂ ಹರಿಹಾಯ್ದ ಸಚಿವ.ಸಿಪಿ ಯೋಗೇಶ್ವರ್, ಹೆಚ್.ಡಿಕೆಯದ್ದು ಸದಾ ದ್ವಂದ್ವ ನಿಲುವು. ಕುಮಾರಸ್ವಾಮಿ ಅವರು ಬೇಕಾದಾಗ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ. ನಂತರ ಅವರನ್ನೇ ದೂಷಿಸುತ್ತಾರೆ. ಅದಕ್ಕೆ ಅವರನ್ನ ದೂರುವಿಡಿ ಎಂದು ಹೇಳುತ್ತಿರುವೆ. ಹತ್ತಿರಕೊಳ್ಳಬಾರದು. ದೂರುವಿಡಬೇಕು ಎಂದು ಹೇಳಿದ್ದೆ ಎಂದರು.

ENGLISH SUMMARY…..

Minister C.P. Yogeeshwar reacts to CM BSY’s resignation hint
Chikkaballapura, July 23, 2021 (www.justkannada.in): In his reaction to the Chief Minister B.S. Yediyurappa’s hint on submission of resignation, Tourism Minister C.P. Yogeshwar has said that nothing is permanent for anyone. “Nobody will remain a minister permanently,” he said.
Speaking to the press persons at the Nandi hills in Chikkaballapura, he said, “the Cheif Minister himself has expressed his view in front of the media. The high command will decide everything. I just had shared my pain and problem.”
He also expressed his ire on former Chief Minister H.D. Kumaraswamy on this occasion. “Kumaraswamy will always have a confused view. Whenever he wants he visits Yediyurappa and get things done. Later he will criticize him. That is why I ask to him away. I had informed that he should be kept away.” he added.
Keywords: CM BSY/ Tourism Minister/ C.P. Yogeshwar/ resignation/ hint/ high command

Key words: CM BS Yeddyurappa- hints – resignation-Minister- C.P yogeshwar