ಕೃಷ್ಣಾನದಿ ಪಾತ್ರದಲ್ಲಿ ಭಾರಿ ಮಳೆ ಪ್ರವಾಹ ಹಿನ್ನೆಲೆ: ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸಿಎಂ ಬಿಎಸ್ ವೈ ಸೂಚನೆ.

ಬೆಂಗಳೂರು,ಜುಲೈ23,2021(www.justkannada.in): ಕೃಷ್ಣಾನದಿ ಪಾತ್ರದಲ್ಲಿ ಭಾರಿ ಮಳೆ ಪ್ರವಾಹ ಹಿನ್ನೆಲೆ,  ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ  ಸಿಎಂ ಬಿಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.jk

ರಾಜ್ಯದಲ್ಲಿ ಇತ್ತೀಚೆಗೆ ವರುಣನ ಅಬ್ಬರ ಜೋರಾಗಿದ್ದು ನದಿ ಪಾತ್ರಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಕೃಷ್ಣಾನದಿ ಪಾತ್ರದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಈ ಸಂಬಂಧ ಬೆಳಗಾವಿ ಜಿಲ್ಲಾಧಿಕಾರಿಯ ಜತೆ ದೂರವಾಣಿ ಮೂಲಕ ಸಿಎಂ ಬಿಎಸ್ ವೈ ಚರ್ಚಿಸಿದ್ದಾರೆ.

ಈ ವೇಳೆ ಹೆಚ್ಚಿನ ನಿಗಾವಹಿಸುವಂತೆ ಜಿಲ್ಲಾಧಿಕಾರಿಗೆ ಸಿಎಂ ಬಿಎಸ್ ವೈ ಸೂಚನೆ ನೀಡಿದ್ದು, ಹೆಚ್ಚಿನ ನೆರವು ಬೇಕಿದ್ದರೇ ಕೂಡಲೇ ಕರೆ ಮಾಡಿ ಎಂದು ತಿಳಿಸಿದ್ದಾರೆ. ಅಲ್ಲದೆ ಪ್ರವಾಹ ಪೀಡಿತ ಇತರ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆಯೂ ಸಿಎಂ ಚರ್ಚಿಸಿದ್ದಾರೆ ಎನ್ನಲಾಗಿದೆ.

ENGLISH SUMMARY…

Huge inflow of water in Krishna river basin: CM BSY instructs to take precautionary measures
Bengaluru, July 23, 2021 (www.justkannada.in): Following incessant rains in the Krishna river basin, the inflow of water has increased. As a result of this, Chief Minister B.S. Yediyurappa has instructed the officials concerned to take precautionary measures.
The State is witnessing good rainfall, and a flood situation has appeared at almost all the river basins. The inflow of water in the Krishna river basin is high, as a result of which the Chief Minister called the Deputy Commissioner of Belagavi and spoke to him.
Instructions have been given to the district administration to be alert, and they have been asked to inform whether any help is necessary. The Chief Minister is said to have spoken with the Deputy Commissioners of several other districts where a similar situation has appeared.
Keywords: Chief Minister/ B.S. Yediyurappa/ rainfall/ Krishna river basin/ flood/ inflow of water/ Belagavi/ Deputy Commissioner/ instructions

Key words: Heavy rain -flooding – Krishna river-  CM BS yeddyurappa- instructs -DC