ಬೆಂಗಳೂರು,ಜು,17,2019(www.justkannada.in): ಸುಪ್ರಿಂಕೋರ್ಟ್ ಆದೇಶ ಪಾಲನೆ ಮಾಡುತ್ತೇನೆ. ಸುಪ್ರೀಂಕೋರ್ಟ್ ನನ್ನ ಮೇಲಿಟ್ಟಿರುವ ವಿಶ್ವಾಸ ಉಳಿಸಿಕೊಳ್ಳುತ್ತೇನೆ. ಇದು ಸುಪ್ರೀಂಕೋರ್ಟ್ ಇಂದು ನೀಡಿರುವ ಆದೇಶ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ಅವರ ಮಾತು.
ಹೌದು, ಇಂದು ಸ್ಪೀಕರ್ ವಿರುದ್ದ ಅತೃಪ್ತ ಶಾಸಕರು ಸಲ್ಲಿಸಿದ್ದ ಅರ್ಜಿ ಕುರಿತು ತೀರ್ಪು ನೀಡಿದ ಸುಪ್ರೀಂಕೋರ್ಟ್, ಶಾಸಕರ ರಾಜೀನಾಮೆ ಮತ್ತು ಅನರ್ಹತೆ ಬಗ್ಗೆ ಸ್ಪೀಕರ್ ನಿರ್ಧರಿಸಲಿ. ಅದು ಅವರ ವಿವೇಚನೆಗೆ ಬಿಟ್ಟಿದ್ದು. ಆದರೇ ರಾಜೀನಾಮೆ ಬಗ್ಗೆ ಕಾಲಮಿತಿಯಲ್ಲಿ ನಿರ್ಧರಿಸಬೇಕು ಎಂದು ಆದೇಶ ಹೊರಡಿಸಿದೆ.
ಕೋಲಾರದಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಸ್ಪೀಕರ್ ರಮೇಶ್ ಕುಮಾರ್ . ಸಂವಿಧಾನ ಆಶಯಗಳಿಗೆ, ಸುಪ್ರಿಂ ವಿಶ್ವಾಸಕ್ಕೆ ಬದ್ದವಾಗಿ ನಡೆದುಕೊಳ್ಳುವೆ. ಸೂಕ್ತ ಸಮಯಕ್ಕೆ, ವಿಳಂಬವಿಲ್ಲದೆ ಕೆಲಸವನ್ನು ನಿರ್ವಹಿಸುತ್ತೇನೆ. ಸುಪ್ರಿಂಕೋರ್ಟ್ ಮಾರ್ಮಿಕವಾಗಿ ಹೇಳಿರುವುದನ್ನು ಗೌರವಿಸಿ ನಡೆದುಕೊಳ್ಳುತ್ತೇನೆ. ಗುರುವಾರ ವಿಶ್ವಾಸ ಮತ ಯಾಚನೆಗೆ ಅಡ್ಡಿಯಿಲ್ಲ, ಅನುಮಾನ ಬೇಡ ಎಂದರು.
ಸದನಕ್ಕೆ ಶಾಸಕರನ್ನ ಕರೆತರುವ ಜವಾಬ್ದಾರಿ ನನ್ನದಲ್ಲ. ಅದು ಅಯಾಪಕ್ಷದ ನಾಯಕರಿಗೆ ಸಂಬಂಧಿಸಿದ್ದು. ಸುಪ್ರೀಂಕೋರ್ಟ್ ನನ್ನ ಜವಾಬ್ದಾರಿ ಹೆಚ್ಚಿಸಿದೆ. ಸುಪ್ರೀಂಕೋರ್ಟ್ ಕಾಲಮಿತಿ ನಿಗದಿ ಪಡಿಸಿಲ್ಲ. ಹೀಗಾಗಿ ನನಗೆ ಜವಾಬ್ದಾರಿ ಹೆಚ್ಚಿದೆ. ಲೆಕ್ಕಾಚಾರ ಪಕ್ಷಗಳಿಗೆ ಸಂಬಂಧಿಸಿದ್ದು. ನನಗಲ್ಲ. ಯಾರನ್ನು ತೃಪ್ತಿ ಪಡಿಸಿವುದು ನನ್ನ ಕರ್ತವ್ಯವಲ್ಲ ಎಂದು ಸುಪ್ರೀಂಕೊರ್ಟ್ ತಿಳಿಸಿದರು.
Key words: Supreme Court –decision-Speaker- Ramesh Kumar -reaction