ಮೈಸೂರು,ಜುಲೈ,23,2021(www.justkannada.in): ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ 105 ಪೌರಕಾರ್ಮಿಕರನ್ನ ಮೈಸೂರು ಮಹಾನಗರ ಪಾಲಿಕೆಯಿಂದ ಏಕಾಏಕಿ ವಜಾಗೊಳಿಸಲಾಗಿದೆ.
ಕಳೆದ ಹತ್ತು ವರ್ಷದಿಂದ ಮೈಸೂರು ನಗರದಲ್ಲಿ ಈ ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದರು. ಇದೀಗ ಪಾಲಿಕೆಯಿಂದ 105 ಪೌರಕಾರ್ಮಿಕರನ್ನ ಏಕಾಏಕಿ ವಜಾಗೊಳಿಸಲಾಗಿದ್ದು, ಇದರಿಂದ ಆಕ್ರೋಶಗೊಂಡಿರುವ ಪೌರಕಾರ್ಮಿಕರು ಪಾಲಿಕೆ ನಡೆ ಖಂಡಿಸಿ ಡಿಸಿ ಆಫೀಸ್ ಮುಂಭಾಗ ಜಮಾಯಿಸಿದ್ದಾರೆ.
ನ್ಯಾಯಯುತವಾದ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಡಿಸಿ ಭೇಟಿಗೆ ಪೌರಕಾರ್ಮಿಕರು ತೆರಳಿದ್ದಾರೆ. ಈ ಕುರಿತು ಮಾತನಾಡಿರುವ ಪೌರಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಪಳನಿಸ್ವಾಮಿ, ಕೆಲಸದಿಂದ ವಜಾಗೊಳಿಸಿದ್ದಕ್ಕೆ ಕಾರಣ ಏನೆಂದು ನಮಗೆ ಗೊತ್ತಿಲ್ಲ. ಕಾರ್ಪೋರೇಷನ್ ಕಮೀಷನರ್ ಕಚೇರಿಯಲ್ಲಿ ಸಿಗುತ್ತಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳೇ ನಮಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ.
Key words: 105 labor- Mysore city corporation- Dismissed.