ಬೆಂಗಳೂರು, ಜು.26, 2021 : (www.justkannada.in news) : ರಾಮಾಯಣ ದಲ್ಲಿ ರಾಮ ಸೀತೆ, ಲಕ್ಷ್ಮಣ 14 ವರ್ಷ ವನವಾಸ ಅನುಭವಿಸಿದ ಕಥೆ ಯಾರಿಗೆ ತಾನೆ ನೆನಪಿರದು?
ಹಾಗೆ, ಬಿ.ಎಸ್. ಯಡಿಯೂರಪ್ಪ ನವರಿಗೂ ಸಹ ಇಂದು ತಾವು ಹದಿನಾಲ್ಕು ವರ್ಷಗಳ ಹಿಂದೆ ಜೆಡಿಎಸ್ ನಾಯಕರು ಎಸಗಿದ ವಚನ ಭ್ರಷ್ಟತೆ, ಅದರ ಕಾರಣದಿಂದ ತಾವು ಮುಖ್ಯಮಂತ್ರಿ ಸ್ಥಾನ ವಂಚಿತರಾದುದನ್ನು ಬಹುಶಃ ಮರೆಯಲಾಗುತ್ತಿಲ್ಲಾ.
ಸುಮಾರು ಆರು ದಶಕಗಳ ನಿರಂತರ ಹೋರಾಟದ ನಂತರ, ಮೊದಲ ಬಾರಿಗೆ, ಅಧಿಕಾರ ತ್ಯಜಿಸುವ ಸಂಧರ್ಭದಲ್ಲಿ ಬಾವುಕರಾದುದು ಮಾತ್ರವಲ್ಲಾ, ಕಣ್ಣೀರ ಧಾರೆಯನ್ನೆ ಹರಿಸಿ, ಮನದಲ್ಲೇ ಬಿಜೆಪಿ ಹಾಗೂ ಜೆಡಿಎಸ್ ಪಕ್ಷವನ್ನು ಶಪಿಸಿದರು ಎಂದೇ ವ್ಯಾಖ್ಯಾನಿಸಬಹುದು.
2011, ಜುಲೈ ೩೧ ರಂದು ಮುಖ್ಯ ಮಂತ್ರಿ ಸ್ಥಾನಕ್ಕೆ ಪಕ್ಷದ ಹೈ ಕಮಾಂಡ್ ಆದೇಶದ ಮೇರೆಗೆ ರಾಜೀನಾಮೆ ನೀಡಿದರು. ಆಗ ಅವರು ತಮ್ಮ ರೇಸ್ ಕೋರ್ಸ ನಿವಾಸದಿಂದ ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ರಾಜ ಭವನಕ್ಕೆ ತೆರಳಿ ರಾಜೀನಾಮ ಸಲ್ಲಿಸಿದರು. ನಂತರ ಬಿಜೆಪಿ ತ್ಯಜಿಸಿ, ಕೆಜೆಪಿ ಕಟ್ಟಿ, ಸೋತು ಮರಳಿ ಬಿಜೆಪಿಗೆ ಬಂದುದು ಸಹ ಇತಿಹಾಸ.
ಆದರೆ ಇಂದು ಅವರು ತಮ್ಮ ರಾಜೀನಾಮೆ ನೀಡುವ ಮೊದಲು ಮಾಡಿದ ಭಾವನಾತ್ಮಕ ವಿಧಾಯ ಭಾಷಣ ಜನರ ಮನ ಕಲಕುವಂತಿತ್ತು. ಲಿಂಗಾಯಿತ ಸಮುದಾಯ ಹೇಗೆ ಪ್ರತಿಕ್ರಿಯಿಸುವುದೊ ಕಾದು ನೋಡಬೇಕಿದೆ.
ತಮ್ಮ ಹೋರಾಟದ ಫಲದಿಂದ ಬಿಜೆಪಿಯನ್ನು ದಕ್ಷಿಣ ಭಾರತದಲ್ಲಿ ಅಧಿಕಾರಕ್ಕೆ ಮೇರು ಮಟ್ಟದ ನಾಯಕನ್ನು ಬಿಜೆಪಿ ನಡೆಸಿಕೊಂಡ ರೀತಿಯ ಬಗ್ಗೆ ಬಹು ಜನರಿಗೆ ಅಸಮಧಾನ ವಿದ್ದರೆ, ಅದು ಸತ್ಯವಲ್ಲವೆ..?
ಸಂಭ್ರಮದಂದೇ ಸೂತಕ :
ಯಡಿಯೂರಪ್ಪ ನವರ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ ಎರಡು ವರ್ಷ ತುಂಬಿದೆ. ಯಾವುದೇ ಸರ್ಕಾರಕ್ಕೂ ಇದು ಸಂಭ್ರಮದ ಸಮಯ. ಆಡಂಬರವಾಗಿ ಆಚರಿಸುವ ಸಮಯ. ಆದರೆ, ಬಿ.ಎಸ್. ಯಡಿಯೂರಪ್ಪ ನವರಿಗೆ ಅವರ ಸಾಧನೆಯನ್ನು ಸರ್ಕಾರದ ಸಾಧನೆಯನ್ನು ಸಂಭ್ರಮಿಸುವ ಮಾತಿರಲಿ, ನೆಮ್ಮದಿಯಿಂದ ಕಾಲ ಕಳೆಯುವ ಸೌಭಾಗ್ಯವು ಇಲ್ಲಾ. ತಮ್ಮ ಸರ್ಕಾರ ಎರಡು ವರ್ಷ ತುಂಬಿದ ಸಂತಸವನ್ನು ಹಂಚಿಕೊಳ್ಳಲು ಅಯೋಜಿಸಿದ್ದ ಸರ್ಕಾರಿ ಕಾರ್ಯಕ್ರಮದಲ್ಲೆ ದುಖಃ ತಪ್ತರಾಗಿ, ತಾವು ಇಂದು ರಾಜೀನಾಮೆ ನೀಡುವ ನಿರ್ದಾರ ಪ್ರಕಟಿಸಿದ್ದು ವಿಪರ್ಯಾಸವೆ ಸರಿ.
–ಎಂ.ಸಿದ್ದರಾಜು, ಹಿರಿಯ ಪತ್ರಕರ್ತರು, ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷರು.
key words : b.s.yadiyurappa-cm-karnataka-resignation-bjp