ಬೆಂಗಳೂರು, ಜುಲೈ ೨೭, ೨೦೨೧ (www.justkannada.in news ): ಮೈಸೂರಿನಲ್ಲಿರುವ ೧೫೬೧.೩೧ ಎಕರೆಗಳಷ್ಟು ಅವಿಭಾಜ್ಯ ಭೂಮಿಗೆ ಸಂಬAಧಿಸಿದಂತೆ ಮೈಸೂರು ಮಹಾರಾಜರ ಪರವಾಗಿ ನೀಡಿದ ಉಚ್ಛ ನ್ಯಾಯಾಲದ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಮಾನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿ ಹೂಡಿದ್ದ ಮನವಿಯನ್ನು ತಿರಸ್ಕರಿಸಲಾಗಿದೆ.
ಉಚ್ಛ ನ್ಯಾಯಾಲಯದ ತೀರ್ಪು ೧೯೫೦ರ ಅಧಿಕಾರ ಒಡಂಬಡಿಕೆ ಹಾಗೂ ಭೂಮಿ ಸಾರ್ವಜನಿಕ ಉದ್ದೇಶಗಳಿಗೆ ಮೀಸಲಿರುವ ‘ಖರಾಬು’ ಭೂಮಿ ಎಂದು ಘೋಷಿಸಲ್ಪಡಲಾಗಿದ್ದ ೧೮೮೧-೧೮೮೩ರ ಬ್ರಿಟಿಷ್ ಸರ್ಕಾರದ ನಿರ್ಧಾರದ ವಿರುದ್ಧವಾಗಿದೆ ಎಂದು ರಾಜ್ಯ ಸರ್ಕಾರ ವಾದಿಸಿತ್ತು.
ರಾಜ್ಯದ ಮನವಿಯನ್ನು ತಿರಸ್ಕರಿಸಿದ ಮಾನ್ಯ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಯು. ಲಲಿತ್ ಹಾಗೂ ಅಜಯ್ ರಸ್ತೋಗಿ ಅವರನ್ನೊಳಗಂಡ ಪೀಠವು, ಪ್ರಶ್ನೆಯಲ್ಲಿರುವ ಭೂಮಿಯನ್ನು ಜನರು ಖರೀದಿಸಿದ ನಂತರ, ಅನೇಕ ದಶಕಗಳು ಕಳೆದ ನಂತರ ರಾಜ್ಯ ಸರ್ಕಾರ ಈಗ ಎಚ್ಚೆತ್ತುಕೊಳ್ಳಲು ಆಗುವುದಿಲ್ಲ ಎಂದಿದೆ.
ರಾಜ್ಯ ಸರ್ಕಾರವು ೧೯೫೦ರ ನಂತರ ಭೂಮಿಯನ್ನು ವಶಪಡಿಸಿಕೊಂಡಿವೆ, ಅಂದರೆ ಇದರ ಅರ್ಥ ಆ ಭೂಪ್ರದೇಶಗಳು ಮಹಾರಾಜರಿಗೆ ಸೇರಿದ್ದವು ಎಂದು ಸರ್ಕಾರವೇ ಒಪ್ಪಿಕೊಂಡಂತೆ ಎಂದು ತಿಳಿಸಿದೆ.
ಈ ಬೆಳವಣಿಗೆಯೊಂದಿಗೆ ೧೫೬೧.೩೧ ಎಕರೆಗಳ ಪೈಕಿ ಭೂಮಿಯನ್ನು ಖರೀದಿಸಿದ ಜನರು, ಆ ಭೂಮಿಯ ಮೇಲೆ ನಿಯಂತ್ರಣ ಸಾಧಿಸುವ ಸರ್ಕಾರದ ಪ್ರಯತ್ನಗಳನ್ನು ತಿರಸ್ಕರಿಸಲ್ಪಟ್ಟಿರುವ ಕಾರಣದಿಂದಾಗಿ ಈಗ ಒಡೆತನವನ್ನು ಹೊಂದಬಹುದು.
ತನ್ನ ವಿಶೇಷ ರಜೆ ಅರ್ಜಿಯಲ್ಲಿ ರಾಜ್ಯ ಸರ್ಕಾರವು ಡಿಸೆಂಬರ್ ೧೫,೨೦೨೦ರ ಮಾನ್ಯ ಉಚ್ಛ ನ್ಯಾಯಾಲಯದ ವಿಭಾಗೀಯ ಪೀಠದ ಆದೇಶದ ಸಿಂಧುತ್ವವನ್ನು ಪ್ರಶ್ನಿಸಿತು. ‘ಆ ಭೂಮಿಯ ಒಡೆತನ ಯಾರಿಗೆ ಸೇರಿದೆ ಹಾಗೂ ಪ್ರಶ್ನೆಯಲ್ಲಿರುವ ಭೂಮಿ ‘ಖರಾಬು’ ಭೂಮಿಯೋ ಅಥವಾ ಅಲ್ಲವೋ ಎಂಬಂತಹ ಪ್ರಶ್ನೆಗಳನ್ನು ಕಡೆಗಣಿಸಲಾಗಿದೆ, ಈ ಪ್ರಶ್ನೆಗಳಿಗೆ ಉತ್ತರ ದೊರೆಯಬೇಕಿದೆ ಎಂದು ವಾದಿಸಿತು.
ಒಟ್ಟು ೧೫೬೩.೩೧ ಎಕರೆ ಭೂಮಿಯ ಪೈಕಿ ೬೦೦ ಎಕರೆ ಭೂಮಿ, ಸರ್ಕಾರ ಹಾಗೂ ಕೆರೆಗಳು, ಅರಣ್ಯ ಭೂಮಿ, ರಾಜ್ಯ ಆಡಳಿತ ತರಬೇತಿ ಸಂಸ್ಥೆ (ಎಟಿಐ), ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ (ಎಸ್ಐಆರ್ಡಿ), ಮೌಂಟೆಡ್ ಪೊಲೀಸ್, ಶೂಟಿಂಗ್ ರೇಂಜ್, ಮಸೀದಿ, ಪೊಲೀಸ್ ಇಲಾಖೆಯ ಮೋಟಾರು ವಿಭಾಗ, ಕಾರಂಜಿ ಹಾಗೂ ತಾವರೆಕಟ್ಟೆಗಳಂತಹ ಸಾರ್ವಜನಿಕ ಕೆರೆಗಳಂತಹ ಸಾರ್ವಜನಿಕ ಆಸ್ತಿಗಳನ್ನು ಒಳಗೊಂಡಿದೆ.
ರಾಜ್ಯ ಸರ್ಕಾರದ ಪರವಾಗಿ ಹಿರಿಯ ವಕೀಲರಾದ ರಂಜಿತ್ ಕುಮಾರ್ ಅವರು ಪ್ರತಿನಿಧಿಸಿದರು. ಅವರು, ಕುರುಬರಹಳ್ಳಿ ಗ್ರಾಮದಲ್ಲಿರುವ ಭೂಮಿಯನ್ನು, ೧೮೮೧-೧೮೮೩ರಲ್ಲಿ ಬ್ರಿಟಿಷ್ ಸರ್ಕಾರ ನಡೆಸಿದ ಭೂಮಿ ಸಮೀಕ್ಷೆಯ ಪ್ರಕಾರ ವರ್ಗ ‘ಬಿ’ – ‘ಖರಾಬು’ ಭೂಮಿ ಎಂದು ನಮೂದಿಸಿರುವುದಾಗಿ ವಾದಿಸಿದರು. ಮೇಲಾಗಿ ಪುನಃ ೧೯೨೧ರಲ್ಲಿ ನಡೆಸಿದಂತಹ ಮರುಸಮೀಕ್ಷೆಯಲ್ಲೂ ಸಹ ಈ ಭೂಮಿಯನ್ನು ಅದೇ ರೀತಿ ವರ್ಗೀಕರಿಸಲಾಗಿದೆ ಎಂದು ತಿಳಿಸಿದರು.
“ಮಾನ್ಯ ಉಚ್ಛ ನ್ಯಾಯಾಲಯವು ಮಾಲೀಕತ್ವದ ವಿಷಯವನ್ನು, ‘ಖರಾಬು’ ಎಂದು ವರ್ಗೀಕರಿಸಿರುವ ವಿಷಯದೊಂದಿಗೆ ಮಿಶ್ರಣ ಮಾಡಿ, ಮಾಲೀಕತ್ವದಿಂದಲೇ ‘ಖರಾಬು’ ಎಂದು ನಿರ್ಧರಿಸಿರುವುದಾಗಿ ಘೋಷಣೆ ಮಾಡಿ ದೊಡ್ಡ ತಪ್ಪನ್ನು ಎಸಗಿದೆ, ಇದರಿಂದಾಗಿ ತಪ್ಪು ಆದೇಶಗಳನ್ನು ರವಾನಿಸಿದಂತಾಗಿದೆ,” ಎಂದು ಹೇಳಲಾಗಿದೆ.
ವಾಸ್ತವದಲ್ಲಿ ಕರ್ನಾಟಕದಲ್ಲಿ ಸಮೀಕ್ಷೆ ಸಂಖ್ಯೆ ಖಾಸಗಿಯಾಗಿರುವಂತಹ ಲಕ್ಷಾಂತರ ರೆಕಾರ್ಡ್ ಆಫ್ ರೈಟ್ಸ್ (ಆರ್ಒಆರ್ಗಳು) ಗಳಿದ್ದು, ಅದೇ ಸಮಯದಲ್ಲಿ ‘ಖರಾಬು’ ಎಂಬ ವರ್ಗೀಕರಣವನ್ನೂ ಹೊಂದಿದೆ, ಎಂದು ತಿಳಿಸಿದೆ.
ವಕೀಲ ನಿಶಾಂತ್ ಪಾಟೀಲ್ ಅವರು ಕುರುಬರಹಳ್ಳಿ ಗ್ರಾಮ, ವಾಸಂತಿ ಹೆಗ್ಡೆ ಹಾಗೂ ಇತರರನ್ನು ಪ್ರತಿನಿಧಿಸಿದರು.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
KEY WORDS : supreme-court-nixes-karnatakas-plea-against-hc-order-on-land-belonging-to-maharaja-of-mysore