ಬೆಂಗಳೂರು, ಜುಲೈ 28, 2021 (www.justkannada.in): ಡಾಲಿ ಇದೀಗ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದ್ದಾರೆ.
ಯೆಸ್. ಇದೀಗ ‘ಬಡವ ರಾಸ್ಕಲ್’ ಆಗಿ ಪ್ರೇಕ್ಷಕರ ಮುಂದೆ ಬರಲು ಧನಂಜಯ್ ಸಜ್ಜಾಗಿದ್ದಾರೆ.
ಅಂದಹಾಗೆ ‘ಯುವರತ್ನ’ ಬಳಿಕ ಡಾಲಿಯ ಯಾವುದೇ ಚಿತ್ರದ ಅಪ್ಡೇಟ್ಗಳು ಹೊರಬಿದ್ದಿರಲಿಲ್ಲ. ಇದೀಗ ಹೊಸ ಸುದ್ದಿಯೊಂದು ಹೊರಬಿದ್ದಿದೆ.
ಈ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದ್ದು, ‘ಬಡವ ರಾಸ್ಕಲ್’ ಅವತಾರದಲ್ಲಿ ಡಾಲಿ ಸೆಪ್ಟೆಂಬರ್ 24 ರಂದು ಪ್ರೇಕ್ಷಕರ ಮುಂದೆ ಬರಲಿದ್ದಾರೆ.
ಈಗಾಗಲೇ ಚಿತ್ರದ ಶೂಟಿಂಗ್ ಹಾಗೂ ಡಬ್ಬಿಂಗ್ ಕಂಪ್ಲೀಟ್ ಆಗಿದ್ದು, ಒಂದಷ್ಟು ಪ್ರಿ ರಿಲೀಸ್ ಕೆಲಸಗಳನ್ನು ಮಾತ್ರ ಉಳಿಸಿಕೊಂಡಿದೆ. ‘ಬಡವ ರಾಸ್ಕಲ್’ನಲ್ಲೂ ರಗಡ್ ಕಥಾಹಂದರವಿದೆ ಎನ್ನಲಾಗಿದೆ.