ಶಿವಮೊಗ್ಗ,ಜುಲೈ,29,2021(www.justkannada.in): ರಾಜ್ಯದಲ್ಲಿ ನೂತನ ಸಿಎಂ ಆಯ್ಕೆಯಾದ ಬೆನ್ನಲ್ಲೆ ಹಲವರು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದು ಈ ಮಧ್ಯೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪಗೆ ಡಿಸಿಎಂ ಸ್ಥಾನ ನೀಡುವಂತೆ ಹಲವು ಮಠಾಧೀಶರು ಆಗ್ರಹಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ನಾನು ಯಾವುದೇ ಡಿಮ್ಯಾಂಡ್ ಇಡುವುದಿಲ್ಲ. ಪಕ್ಷದ ನಾಯಕರ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ. ಸಚಿವನಾಗು ಎಂದರೇ ಆಗುತ್ತೇನೆ. ಡಿಸಿಎಂ ಆಗಿ ಕೆಲಸ ಮಾಡುವಂತೆ ಸೂಚಿಸದರೂ ಡಿಸಿಎಂ ಆಗಲು ತಯಾರಿದ್ದೇನೆ ಎಂದು ತಿಳಿಸಿದ್ದಾರೆ.
ನಮ್ಮ ಸಮಾಜ ಸ್ವಾಮೀಜಿಗಳು ಉಪಮುಖ್ಯಮಂತ್ರಿಯಾಗಲು ಹೇಳುತ್ತಿದ್ದಾರೆ. ನನಗೆ ಯಾವುದೇ ಹುದ್ದೆ ಕೊಟ್ಟರು ನಿಭಾಯಿಸುತ್ತೇನೆ. ನಾನು ಯಾವುದೇ ಡಿಮ್ಯಾಂಡ್ ಇಡುವುದಿಲ್ಲ. ತಮ್ಮ ಹಿರಿಯರು ತೆಗದುಕೊಂಡ ನಿರ್ಧಾರಕ್ಕೆ ನಾವು ಬದ್ಧ. ಸಚಿವ ಸ್ಥಾನದ ವಿಚಾರದಲ್ಲಿ ಹೈಕಮಾಂಡ್ ನಿರ್ಧರವೇ ಅಂತಿಮ. ಇನ್ನೇರಡು ವರ್ಷ ಒಳ್ಳೆ ಸರ್ಕಾರ ಕೊಡುತ್ತೇವೆ ಎಂದು ಕೆ.ಎಸ್ ಈಶ್ವರಪ್ಪ ತಿಳಿಸಿದರು.
ಕಾಂಗ್ರೆಸ್ ಗೆ ಟಾಂಗ್.
ಇದೇ ವೇಳೆ ಕಾಂಗ್ರೆಸ್ ಗೆ ಟಾಂಗ್ ನೀಡಿದ ಕೆ.ಎಸ್ ಈಶ್ವರಪ್ಪ, ಸಿಎಂ ಬದಲಾವಣೆಯಾದರೆ ಸಾಕು ಸರ್ಕಾರ ಬೀಳುತ್ತೆ ಅಂತ ಕಾಂಗ್ರೆಸ್ನವರು ಹೇಳಿತಿದ್ದರು. ಆದರೆ ನಾವು ಎರಡು ವರ್ಷ ಒಳ್ಳೆ ಸರ್ಕಾರ ಕೊಡುತ್ತೇವೆ. ಬಿಜೆಪಿಯಲ್ಲಿ ಎಲ್ಲ ಗೊಂದಲಗಳು ನಿವಾರಣೆ ಆಗಿವೆ. ಮೂರೇ ದಿನದಲ್ಲಿ ಎಲ್ಲ ಪರಿಹಾರ ಆಗಿದೆ. ಪರಿಸ್ಥಿತಿ ಲಾಭ ಪಡೆಯಲು ಕಾಂಗ್ರೆಸ್ ಪ್ರಯತ್ನ ಮಾಡಿತ್ತು. ಈಗ ಅವರಿಗೆಲ್ಲ ಸಂಕಷ್ಟ ಶುರುವಾಗಿದೆ ಎಂದು ಟಾಂಗ್ ನೀಡಿದರು.
Key words: DCM -Former minister-KS Eshwarappa