ಬೆಂಗಳೂರು,ಜು,18,2019(www.justkannada.in): ಈ ಹಿಂದೆ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡಿ ಸಚಿವರಾಗಿ ನಂತರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿಎಸ್ ಪಿ ಶಾಸಕ ಎನ್. ಮಹೇಶ್ ಇದೀಗ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸಮತಯಾಚನೆ ವೇಳೆ ತಟಸ್ಥವಾಗಿರಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇಂದು ವಿಧಾನಸಭೆಯಲ್ಲಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸಮತಯಾಚನೆ ಮಾಡಲಿದ್ದಾರೆ. ಈ ವೇಳೆ ಬಿಎಸ್.ಪಿ ಶಾಸಕ ತಟಸ್ಥವಾಗಿರಲಿದ್ದಾರೆ ಎನ್ನಲಾಗುತ್ತಿದೆ. ಯಾರಿಗೆ ಬೆಂಬಲ ನೀಡಬೇಕು ಎಂಬುದರ ಬಗ್ಗೆ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಸೂಚನೆ ನೀಡದ ಹಿನ್ನೆಲೆ. ಶಾಸಕ ಮಹೇಶ್ ಈ ನಿರ್ಧಾರ ಬಂದಿದ್ದಾರೆ .
ಮಹೇಶ್ ಅವರ ನಿರ್ಧಾರದಿಂದ ದೋಸ್ತಿ ಸರ್ಕಾರಕ್ಕೆ ಮತ್ತೊಂದು ಸಂಖ್ಯೆ ಖಡಿತವಾಗಲಿದೆ. ಇನ್ನು ವಿಶ್ವಾಸಮತಯಾಚನೆಯಲ್ಲಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸೋಲುತ್ತಾರೆಂಬ ವಿಶ್ವಾಸದಲ್ಲಿ ಬಿಜೆಪಿ ನಾಯಕರಿದ್ದಾರೆ. ಇನ್ನು ಪಕ್ಷೇತರರಿಬ್ಬರು ಸಹ ಬಿಜೆಪಿಗೆ ಬೆಂಬಲ ನೀಡಿದ್ದು, ಬಹುಮತ ಸಾಬೀತು ಪಡಿಸಲು ಮ್ಯಾಜಿಕ್ ನಂಬರ್ 105 ಆಗಿದೆ. ಬಿಜೆಪಿಗೆ ಪಕ್ಷೇತರರಿಬ್ಬರ ಬೆಂಬಲ ಸೇರಿ 107 ಆಗಲಿದೆ. ಸಮ್ಮಿಶ್ರ ಸರ್ಕಾರ 101 ಸಂಖ್ಯಾಬಲವಿದೆ.
Key words: BSP-MLA N Mahesh- decision -remain –Neutral-vote of confidence