ಬೆಂಗಳೂರು,ಜು,18,2019(www.justkannada.in): ಮೊದಲು ಶಾಸಕರ ವಿಪ್ ವಿಚಾರ ಇತ್ಯಾರ್ಥವಾಗಬೇಕು. ಅಲ್ಲಿವರೆಗೆ ವಿಶ್ವಾಸಮತಯಾಚನೆ ಪ್ರಸ್ತಾಪವನ್ನ ಮುಂದೂಡಿ ಎಂದು ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.
ಇಂದು ವಿಧಾನಸಭೆ ಕಲಾಪದಲ್ಲಿ ಕ್ರಿಯಾಲೋಪದ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಹಗ್ಗಜಗ್ಗಾಟ ನಡೆಯಿತು. ಬಿಜೆಪಿ ಕ್ರಿಯಾಲೋಪಕ್ಕೆ ಆಕ್ಷೇಪ ವ್ಯಕ್ತಪಡಿಸಿ ವಿಶ್ವಾಸಮತಯಾಚನೆಗೆ ಆಗ್ರಹಿಸಿದರು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಶಾಸಕರ ವಿಪ್ ವಿಚಾರ ಇತ್ಯಾರ್ಥವಾಗಬೇಕು. ಹೀಗಾಗಿ ವಿಪ್ ವಿಚಾರ ಇತ್ಯಾರ್ಥವಾಗುವವರೆಗೂ ವಿಶ್ವಾಸಮತಯಾಚನೆ ಮುಂದೂಡಿ ಎಂದು ಆಗ್ರಹಿಸಿದರು.
ಇದಾದ ನಂತರ ಈ ಬಗ್ಗೆ ಅಡ್ವಕೇಟ್ ಜನರಲ್ ಜತೆ ಚರ್ಚಿಸಬೇಕು ಎಂದು ಹೇಳಿ ಸ್ಪೀಕರ್ ರಮೇಶ್ ಕುಮಾರ್ ವಿಧಾನಸಭೆ ಕಲಾಪವನ್ನ ಮಧ್ಯಾಹ್ನ 3ಗಂಟೆಗೆ ಮುಂದೂಡಿದರು.
Key words: Postpone-vote of confidence-siddaramaiah- session -Adjournment