ಬೆಂಗಳೂರು,ಆಗಸ್ಟ್,5,2021(www.justkannada.in): ಬಿಎಸ್ ವೈ ಅವರನ್ನು ಇಳಿಸುವಾಗ ಇದ್ದ ಬಲಶಾಲಿ ದೆಹಲಿ ಹೈಕಮಾಂಡ್, ಇಳಿದಮೇಲೆ ಮಂಡಿಯೂರಿ ಶರಣಾಯಿತಲ್ಲ ಏಕೆ..? ಎಂದು ರಾಜ್ಯ ಕಾಂಗ್ರೆಸ್ ವ್ಯಂಗ್ಯವಾಡಿದೆ.
ಈ ಕುರಿತು ಟ್ವಿಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಬಿಎಸ್ ವೈ ಅವರು ತಮ್ಮ ಕಣ್ಣೀರಿಗೆ ತಕ್ಕ ಪ್ರತಿಕಾರ ತೀರಿಸಿಕೊಳ್ಳುತ್ತಿದ್ದಾರೆ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ತಮ್ಮ ವಿರುದ್ಧದ ಬಂಡಾಯಗಾರರನ್ನ ಸಂಪುಟದಿಂದ ದೂರವಿಡುವ ಮೂಲಕ ಮೀರ್ ಸಾಧಿಕ್ ನಳೀನ್ ಕುಮಾರ್ ಕಟೀಲ್ ತಂಡಕ್ಕೆ ಮರ್ಮಾಘಾತ ನೀಡಿದ್ದಾರೆ. ಕಟೀಲ್ ಕಾಮಿಡಿ ಮಾಡಲು ಮಾತ್ರ. ಸಿಎಂ ಆಯ್ಕೆಯಿಂದ ಸಚಿವರ ಆಯ್ಕೆವರೆಗೂ BSYಅವರೇ ಹೈಕಮಾಂಡ್ ಆಗಿದ್ದಾರೆ ಎಂದು ನಳೀನ್ ಕುಮಾರ್ ಕಟೀಲ್ ಗೆ ಕುಟುಕಿದೆ.
ಬಿಜೆಪಿಯಲ್ಲಿ ದಲಿತ, ಹಿಂದುಳಿದವರಿಗೆ ಕೊನೆ ಸಾಲಿನ ಕುರ್ಚಿ ಮಾತ್ರ.
ಹಾಗೆಯೇ ದವಳಗಿರಿ ಸರ್ಕಾರದ ಸಂಪುಟದಲ್ಲಿ ದಲಿತರನ್ನ ಕಡೆಗಣಿಸಿ ಬಿಜೆಪಿ ತನ್ನ ದಲಿತ ವಿರೋಧಿ ನೀತಿಯನ್ನ ಮತ್ತೊಮ್ಮೆ ನಿರೂಪಿಸಿದೆ. ದಲಿತರನ್ನು ಸಿಎಂ ಮಾಡುವುದಿರಲಿ ಕೊನೆ ಪಕ್ಷ ಸಂಪುಟದಲ್ಲಿಯೂ ಪ್ರಾತಿನಿಧ್ಯ ನೀಡದ ಬಿಜೆಪಿ ಇತರ ಪಕ್ಷಗಳಿಗೆ ಆರೋಪಿಸುವುದು ಹಾಸ್ಯಾಸ್ಪದ. ಬಿಜೆಪಿಯಲ್ಲಿ ದಲಿತ, ಹಿಂದುಳಿದವರಿಗೆ ಕೊನೆ ಸಾಲಿನ ಕುರ್ಚಿ ಮಾತ್ರ ಎಂದು ಟೀಕಿಸಿದೆ.
ಮೊದಲೆಲ್ಲ ಕಾಂಗ್ರೆಸ್ ಗೆ ‘ಹೈಕಮಾಂಡ್ ಸಂಸ್ಕೃತಿ’ ಎಂದು ಹೇಳುತ್ತಿದ್ದ ಬಿಜೆಪಿ ಈಗ ತಮ್ಮದೇ ‘ಬಲಿಷ್ಠ ಹೈಕಮಾಂಡ್’ ಎಂದು ಬಿಂಬಿಸಿಕೊಳ್ಳುತ್ತಾ ತಮ್ಮ ಡಬಲ್ ಸ್ಟ್ಯಾಂಡರ್ಡ್ ನೀತಿ ನಿರೂಪಿಸಿತ್ತು! ಬಿಎಸ್ ವೈ ಅವರನ್ನು ಇಳಿಸುವಾಗ ಇದ್ದ ಬಲಶಾಲಿ ದೆಹಲಿ ಹೈಕಮಾಂಡ್, ಇಳಿದಮೇಲೆ ಮಂಡಿಯೂರಿ ಶರಣಾಯಿತಲ್ಲ ಏಕೆ..? ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ENGLISH SUMMARY….
The BJP high command which was strong while removing BSY, why did it surrender after that: Cong. questions
Bengaluru, August 5, 2021 (www.justkannada.in): ‘The Karnataka Pradesh Congress Committee today said that, “The BJP high command which was strong while removing B.S. Yediyurappa, why did it surrender after that.?”
The State Congress party in its tweet stated that BSY is taking revenge for his tears, by keeping away his rebel Nalin Kumar Kateel, who had played the role of Mir Sadik. Nalin Kumar Katil is just like a joker, whereas the decision of BSY remains the ultimate right from selecting the CM to Ministers, the tweet read.
The tweet also read that the Dalits are given only last bench under the BJP rule, which has been proved yet again.
Keywords: KPCC/ Congress party/ high command/ B.S. Yediyurappa/ revenge
Key words: Why- Delhi- High Command, -BS yeddyurappa-not -bow down-State Congress