ಬೆಂಗಳೂರು, ಜು.18,2019(www.justkannada.in): ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ಮುಂಬೈ ಆಸ್ಪತ್ರೆಗೆ ದಾಖಲಾ ದ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಕುಟುಂಬವನ್ನ ಸಂಪರ್ಕಿಸಿ ಮಾಹಿತಿ ಕಲೆ ಹಾಕಿ ಸಮಗ್ರ ಮಾಹಿತಿ ನೀಡಿ ಎಂದು ಗೃಹ ಸಚಿವರಿಗೆ ಸ್ಪೀಕರ್ ರಮೇಶ್ ಕುಮಾರ್ ಸೂಚಿಸಿದರು.
ಇಂದು ಮಧ್ಯಾಹ್ನ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ಅವರು ಮುಂಬೈ ಆಸ್ಪತ್ರೆಗೆ ದಾಖಲಾದ ಬಗ್ಗೆ ಚರ್ಚೆ ನಡೆಯಿತು. ಬಿಜೆಪಿಯವರು ಶ್ರೀಮಂತ ಪಾಟೀಲ್ ಅವರನ್ನ ಅಪಹರಿಸಿ ಆಸ್ಪತ್ರೆಯಲ್ಲಿಟ್ಟು ಫೋಟೋ ರಿಲೀಸ್ ಮಾಡಿದ್ದಾರೆಂದು ಸಚಿವ ಡಿ.ಕೆ ಶಿವಕುಮಾರ್ ಆರೋಪಿಸಿದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, , ಶ್ರೀಮಂತ ಪಾಟೀಲ್ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ್ದೀರಿ. ಯಾರು ಯಾವ ಫ್ಲೈಟ್ ನಲ್ಲಿ ಎಲ್ಲಿಗೆ ಹೋದರು ಇದೆಲ್ಲದರ ಬಗ್ಗೆ ನಾನು ಮಾತನಾಡಲ್ಲ. ಇದನ್ನ ತನಿಖೆ ಮಾಡಿಸುವ ಕೆಲಸ ನನ್ನದಲ್ಲ. ಇದರ ಬಗ್ಗೆ ನಾಯಕರು ದೂರು ನೀಡಬೇಕಿತ್ತು. ಶ್ರೀಮಂತ ಪಾಟೀಲ್ ಹೆಸರಲ್ಲಿ ಪತ್ರ ಬಂದಿದೆ. ಇಂದು ಬೆಳಗ್ಗೆ ಶ್ರೀಮಂತ ಪಾಟೀಲ್ ಸಹಿ ಮಾಡಿದ್ದಾರೆ ಎನ್ನಲಾದ ಪತ್ರ ನನಗೆ ಸಿಕ್ಕಿದೆ. ಆದರೆ ಅದರಲ್ಲಿ ಯಾವುದೇ ಲೆಟರ್ ಪ್ಯಾಡ್ ಇಲ್ಲ. ತಾನು ತೀವ್ರ ಹೃದಯ ನೋವಿನಿಂದ ಬಳಲುತ್ತಿದ್ದು, ಸೈಂಟ್ ಜಾರ್ಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸದನಕ್ಕೆ ಗೈರಾಗುತ್ತೇನೆ ಎಂದು ತಿಳಿಸಲಾಗಿದೆ. ಆದರೆ ಒಬ್ಬ ಸ್ಪೀಕರ್ ಗೆ ಸಲ್ಲಿಸಬೇಕಾದ ರೀತಿಯಲ್ಲಿ ಆ ಪತ್ರವಿಲ್ಲ. ಆದ್ದರಿಂದ ಶ್ರೀಮಂತ ಪಾಟೀಲ್ ರ ಪತ್ರ ಸಹಜವೆಂಬಂತೆ ಕಾಣುತ್ತಿಲ್ಲ ಎಂದು ಹೇಳಿದರು.
ಹಾಗೆಯೇ ಶ್ರೀಮಂತ ಪಾಟೀಲ್ ಅವರ ಕುಟುಂಬಸ್ಥರನ್ನ ಸಂಪರ್ಕಿಸಿ ಮಾಹಿತಿ ಕಲೆ ಹಾಕಿ ಸಮಗ್ರ ಮಾಹಿತಿ ನೀಡಿ. ನಿಮ್ಮಿಂದಾಗದಿದ್ದರೇ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸುವೆ ಎಂದು ಗೃಹ ಸಚಿವರಿಗೆ ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದರು.
Key words: Contact -MLA Shrimanth Patil’s-Family- Speaker -Ramesh Kumar -instructs