ಕೊರೋನಾ 3ನೇ ಅಲೆ ಎದುರಿಸಲು ಸಿದ್ದತೆ : ಕೋವಿಡ್ ನಿರ್ವಹಣೆ ಹಾಗೂ ನಿಯಂತ್ರಣ ಕುರಿತು ಮಾಹಿತಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ.

ಮೈಸೂರು,ಆಗಸ್ಟ್,9,2021(www.justkannada.in): ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಂಡು ಕೊರೋನಾದ ಮೂರನೆ ಅಲೆ ವ್ಯಾಪಿಸದಂತೆ  ತಡೆಗಟ್ಟಲು ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕೋವಿಡ್ ನಿಯಂತ್ರಣ ಸಂಬಂಧ  ಸಿಎಂ ಬಸವರಾಜ ಬೊಮ್ಮಾಯಿ ಮೈಸೂರಿನಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸಭೆ ನಡೆಸಿದರು. ಸಭೆ ಬಳಿಕ ಸುದ್ದಿಗೋಷ್ಠಿಗೆ ನಡೆಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕೊರೊನಾದ ಮೂರನೇ ಅಲೆ ಬರದಿರಲಿ ಎಂದು ಪ್ರಾರ್ಥಿಸುತ್ತಿದ್ದೇನೆ. ಒಂದು ವೇಳೆ ಕೊರೊನಾದ ಮೂರನೇ ಅಲೆ ಬಂದರೂ ಅದನ್ನು ಎದುರಿಸಲು ಸಿದ್ದತೆ ಮಾಡಿಕೊಂಡಿದ್ದೇವೆ. ಮೊದಲ ಮತ್ತು ಎರಡನೇ ಕೊರೊನಾ ಅಲೆಯನ್ನು ಎದುರಿಸಿರುವ ಅನುಭವದ ಆಧಾರದ ಮೇಲೆ ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸುತ್ತೇವೆ. ಮಹಾರಾಷ್ಟ್ರ, ಕೇರಳ ಮೂಲದಿಂದ ಮೊದಲ ಹಾಗೂ ಎರಡನೇ ಅಲೆ ರಾಜ್ಯಕ್ಕೆ ಅಪ್ಪಳಿಸಿತ್ತು‌. ಹಾಗಾಗಿ ರಾಜ್ಯದ ಗಡಿ ಭಾಗದಲ್ಲಿ ವಿಶೇಷ ನಿಗಾ ವಹಿಸಲಾಗಿದೆ. ಗಡಿ ಭಾಗದ ಹತ್ತು ಕಿ ಮೀ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಕೊರೊನಾ ಲಸಿಕೆ ಹಾಕುವ ಕಾರ್ಯವನ್ನು ಚುರುಕುಗೊಳಿಸಲಾಗಿದೆ. ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಂಡು ಕೊರೊನಾದ ಮೂರನೆ ಅಲೆ ವ್ಯಾಪಿಸದಂತೆ ತಡೆಗಟ್ಟಲಾಗುವುದು‌ ಎಂದು ತಿಳಿಸಿದರು.

ಮೈಸೂರಿನ ಪಾಸಿಟಿವಿಟಿ ರೇಟ್ 1.19 ಇದೆ.  ಕಳೆದ ಒಂದು ವಾರದಿಂದ 20 ಡೆತ್ ಆಗಿದೆ.  1 ಲಕ್ಷದ ,26  ಸಾವಿರ ವ್ಯಾಕ್ಸಿನೇಷನ್‌ ಮೈಸೂರು ಜಿಲ್ಲೆಯಲ್ಲಿ‌ ಆಗಿದೆ. ಕೋವಿಡ್ ಮೂರನೇ ಅಲೆ ದೇವರ ದಯೆಯಿಂದ ಬರಬಾರದು. ಬಂದ್ರೆ ಏನೆಲ್ಲ ಕ್ರಮ ಕೈಗೊಳ್ಳಬೇಕು ಕೈಗೊಳ್ಳಲಾಗುತ್ತದೆ. ಎಕ್ಸ್ಪರ್ಟ್ ಕಮಿಟಿ ಸಲಹೆ, ಕೇರಳ, ಮಹಾರಾಷ್ಟ್ರ ದಲ್ಲಿ ಕೋವಿಡ್ ಹೆಚ್ಚಾದ ಹಿನ್ನಲೆ. ಗಡಿಯಲ್ಲಿ ಭದ್ರತೆಯನ್ನ ಮಾಡಲಾಗಿದೆ‌ ಎಂದರು.

ಅಧಿಕಾರಿಗಳು ಚೆಕ್ ಪೋಸ್ಟ್ ನಲ್ಲಿ ಸಿರಿಯಸ್ ಆಗಿ ಕೆಲಸ ಮಾಡಬೇಕು. ಚೆಕ್ ಪೋಸ್ಟ್ ನಲ್ಲಿ ಕೆಲಸ ಮಾಡುವ ಎಲ್ಲರಿಗೂ ವ್ಯಾಕ್ಸಿನೇಷನ್‌ ಆಗಬೇಕು. ಸದ್ಯ ರಾಜ್ಯಕ್ಕೆ 65 ಲಕ್ಷ  ಡೋಸ್ ಲಸಿಕೆ ಬರ್ತಿದೆ. ಮುಂದಿನ ದಿನಗಳಿಗೆ  1 ಕೋಟಿ ಲಸಿಕೆಗೆ ಮನವಿ ಮಾಡಲಾಗಿದೆ. ಮುಂದಿನ ತಿಂಗಳಿನಿಂದ  1.5 ಕೋಟಿ ಲಸಿಕೆ  ಬಂದ್ರೆ ದಿನಕ್ಕೆ 5 ಲಕ್ಷ ವ್ಯಾಕ್ಸಿನೇಷನ್‌ ಗುರಿ ಹೊಂದಿದ್ದೇವೆ. ಸದ್ಯ 9 ಸಾವಿರ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಮೈಸೂರು ಜಿಲ್ಲೆಗೆ ಮಂಡ್ಯ, ಚಾ,ನಗರ, ಕೊಡಗು, ಕೇರಳ ದಿಂದ ಹೆಚ್ಚು ಜನ ಬರ್ತಾರೆ. ಹೀಗಾಗಿ ಮೈಸೂರಿ‌ನಲ್ಲಿ ಹೆಚ್ಚು ಟೆಸ್ಟ್ ಆಗಬೇಕು. ಮೈಸೂರಿನಲ್ಲಿ 14 ಆಕ್ಸಿಜನ್ ಜನರೇಟರ್  ಮುಂಜೂರಾಗಿದೆ‌ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಎಫೆಕ್ಟ್ ಅಂತಾ ತಜ್ಞರು ವರದಿ ನೀಡಿದ್ದಾರೆ. ರಾಜ್ಯದ ಪ್ರತಿಯೊಂದು ಪಿ ಎಚ್.ಸಿ ಯಲ್ಲಿ, ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಶಾಲೆಗೆ ಬರುವ ಹಾಗೂ ಬಾರದ ಮಕ್ಕಳು 6 ರಿಂದ 14 ವರ್ಷದ ಮಕ್ಕಳಿಗೆ ಶಿಬಿರದ ವತಿಯಿಂದ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಪ್ರತಿಯೊಂದು ಗ್ರಾಮ ಹಾಗೂ ಶಾಲೆಯಲ್ಲಿ ಹೆಲ್ತ್ ಕ್ಯಾಂಪ್ ಮಾಡಲಾಗುತ್ತದೆ. ಮೈಸೂರು ನಗರದಿಂದಲೇ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತೇವೆ. ಹೆಲ್ತ್ ಡಿಪಾರ್ಟ್ ಮೆಂಟ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ತಪಾಸಣೆ ಮಾಡಬೇಕು. ಮಕ್ಕಳಿಗೆ ಹ್ಯುಮ್ಯುನಿಟಿ ಕೊರತೆಯಾಗದಂತೆ ಕ್ರಮ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡುತ್ತೇವೆ ಎಂದರು.

ಮೇಕೆದಾಟು ಯೋಜನೆ ವಿಚಾರಕ್ಕೆ ಸಂಬಂದಿಸಿದಂತೆನಾನು ಒಂದು ವಾರ ಅಥವಾ ಹತ್ತು ದಿನಗಳಲ್ಲಿ ದೆಹಲಿಗೆ ಹೋಗುತ್ತೇನೆ. ಲೀಗಲ್ ಟೀಂ ಮೂಲಕ ದೇಹಲಿಯಲ್ಲಿ ಚರ್ಚೆ ಮಾಡುತ್ತೇನೆ. ನಮ್ಮ ಉದ್ದೇಶ ಮೊದಲು ಡಿಪಿಆರ್ ಕ್ಲೀಯರ್ ಆಗಬೇಕು. ಆ ಕಡೆಗೆ ಹೆಚ್ಚು ಒತ್ತಡ ಹಾಕಲಾಗುತ್ತದೆ. ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ ಹಿನ್ನಲೆ, ಇಂತಹ ಹಲವು ಸಂದರ್ಭಗಳನ್ನ ನಾವು ಎದುರಿಸಿದ್ದೇವೆ.ತಮಿಳುನಾಡಿನ ಒತ್ತಡದಿಂದ ಡಿಪಿಆರ್ ಗೆ ಸಮ್ಮತಿ ಸಿಕ್ತಿಲ್ಲ ಅನ್ನೋದು ಸರಿಯಲ್ಲ. ನಾವು ಶೀಘ್ರವೇ ಮೇಕೆದಾಟು ಪ್ರಾಜೆಕ್ಟ್ ಡಿಪಿಆರ್ ಗೆ ಅನುಮತಿ ಪಡೆಯುತ್ತೇವೆ. ಸುಪ್ರೀಂ ಕೋರ್ಟ್ ನಿರ್ದೇಶನ ಸಂಬಂಧ ನಾವು ಕೇಂದ್ರಕ್ಕೆ ಒಂದಷ್ಟು ಅಂಶಗಳನ್ನ ಮನವರಿಕೆ ಮಾಡಲಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಮೈಸೂರು ದಸರಾ ಹಿನ್ನಲೆ. ಮುಂದಿನ ಒಂದೆರಡು ವಾರಗಳಲ್ಲಿ ಕೋವಿಡ್ ಹೆಚ್ಚಾಗುತ್ತೊ, ಕಡಿಮೆ ಆಗುತ್ತೊ ನೋಡುತ್ತೇವೆ. ಹೈ ಪವರ್ ಕಮಿಟಿ ಯಲ್ಲಿ ಮೈಸೂರು ದಸರಾ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಚಿವರಾದ ಸುಧಾಕರ್, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜು, ಕೆ.ಸಿ.ನಾರಾಯಣ್ ಗೌಡ, ಡಿಸಿ ಬಗಾದಿ ಗೌತಮ್ ಹಾಗೂ ಸ್ಥಳೀಯ ಶಾಸಕರು ಉಪಸ್ಥಿತರಿದ್ದರು.

Key words: Corona -ready – face- 3rd wave-CM Basavaraja Bommai-mysore